ಮೈಸೂರು

ಬೇಡಿಕೆ ಈಡೇರಿಕೆಗಾಗಿ ಧರಣಿ : ಮಾರ್ಚ್ 6 ರಂದು

ಕರ್ನಾಟಕದ ಸರ್ಕಾರಿ ಗಿರಿಜನ ಆಶ್ರಮ ಶಾಲೆಗಳನ್ನು ಕೇರಳ ಮಾದರಿ ಮಾಡುವಂತೆ  ಒತ್ತಾಯಿಸಿ ಮಾರ್ಚ್ 6 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಿರಂತರ ಆಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ  ಪುಟ್ಟ ಬಸವಯ್ಯ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 116 ಆಶ್ರಮ ಶಾಲೆಗಳಿದ್ದು, 2016-17 ನೇ ಸಾಲಿನಲ್ಲಿ ಸುಮಾರು 9645 ಮಕ್ಕಳು ದಾಖಲಾಗಿದ್ದು, ಆ ಮಕ್ಕಳ ಶಿಕ್ಷಣ ಗುಣಮಟ್ಟ ಸರಿಯಿಲ್ಲದ ಕಾರಣ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಲವಾರು ಚಳುವಳಿಗಳನ್ನು ಮಾಡಿದ್ದರೂ ಸಹ ಸ್ಪಂದನೆ ಸಿಗದ ಕಾರಣ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಬುಡಕಟ್ಟು ಕೃಷಿಕರ ಸಂಘದ ಪದಾಧಿಕಾರಿಗಳಾದ ಬಸಪ್ಪ ಲಿಂಗಾಪುರ, ಪ್ರಕಾಶ್, ಜೈರಾಜ್, ಸಿದ್ದರಾಜು ಹಾಜರಿದ್ದರು.

Leave a Reply

comments

Related Articles

error: