ಮೈಸೂರು

ಡಿ. 11 : ಗಾನಭಾರತೀಯಲ್ಲಿ ವೀಣೆ ಚೊಕ್ಕಮ್ಮ ಸಂಸ್ಮರಣಾ ಕಾರ್ಯಕ್ರಮ

ಮೈಸೂರು,ಡಿ.7:- ಕುವೆಂಪುನಗರದಲ್ಲಿರುವ ಗಾನಭಾರತೀಯಲ್ಲಿ  ಡಿಸೆಂಬರ್ 11ರಂದು ಸಂಜೆ 6 ಗಂಟೆಗೆ ವಿದುಷಿ ವೀಣೆಚೊಕ್ಕಮ್ಮ ಸಂಸ್ಮರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಕರ್ನಾಟಕ ಸಂಗೀತದ ಅತ್ಯುತ್ತಮ ವೈಣಿಕರಾದ ಆರ್ ವಿಶ್ವೇಶ್ವರನ್‍ ಅವರು ವೀಣಾವಾದನ ಪ್ರಸ್ತುತ ಪಡಿಸಲಿದ್ದಾರೆ. ಅವರಿಗೆ ಮೈಸೂರು ಎ ರಾಧೇಶ ಮೃದಂಗದಲ್ಲಿ, ವಿದ್ವಾನ್ ಶರತ್ ಕೌಶಿಕ್ ಘಟದಲ್ಲಿ ಸಹಕರಿಸಲಿದ್ದಾರೆ.

ವಿದ್ವಾನ್ ಪ್ರೊ.ಆರ್ ವಿಶ್ವೇಶ್ವರನ್ ಪ್ರಖ್ಯಾತ ವೈಣಿಕರು, ವಾಗ್ಗೇಯಕಾರರು, ಗುರುಗಳು ಹಾಗೂ ಸಂಗೀತಜ್ಞರು. ಸಂಗೀತದ ಕುಟುಂಬದಲ್ಲೇ ಜನಿಸಿದ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಹಾಗೂ ಬಹುಕಾಲ ಉಳಿಯುವಂತಹದ್ದು. ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಬಹುಕಾಲ ಸೇವೆ ಸಲ್ಲಿಸಿದ್ದಾರೆ. ವೀಣಾ ವಾದಕರಾಗಿ ಅಪ್ರತಿಮ ಪ್ರೌಢಿಮೆ ಸಾಧಿಸಿರುವ ಅವರು ತಮ್ಮದೇ ಆದ ವಿಶಿಷ್ಟ ರೀತಿಯ ಶೈಲಿಯನ್ನು ರೂಪಿಸಿಕೊಂಡಿದ್ದಾರೆ. ಭಾರತ ಮಾತ್ರ ವಲ್ಲದೆ ಜಗತ್ತಿನ ಹಲವು ದೇಶಗಳ ಪ್ರತಿಷ್ಠಿತ ಸಭೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಸಂಗೀತಕ್ಕೆ ಸಂಬಂಧಿಸಿದಂತೆ ವಿದ್ವತ್‍ಪೂರ್ಣ ಲೇಖನಗಳನ್ನು, ಗ್ರಂಥಗಳನ್ನು ರಚಿಸಿದ್ದಾರೆ. ವಾಗ್ಗೇಯ ವಿಶ್ವೇಶ್ವರಿ, ಸಂಗೀತ ಶಾಸ್ತ್ರ ರಸಾಯನ, ಫ್ಯಾಕ್ಟ್ಸ್‍ಆಫ್ ಮ್ಯೂಸಿಕ್ ಅವರ ಕೆಲವು ಗ್ರಂಥಗಳು. ಇದರ ಜೊತೆಗೆ ಹೊಸ ರಾಗಗಳ ಸೃಷ್ಟಿಯಲ್ಲೂ ತಮ್ಮ ವಿದ್ವತ್ ನ್ನು ಮೆರೆದಿದ್ದಾರೆ. ಗುರುಗಳಾಗಿ ಹಲವು ಪ್ರೌಢ ಶಿಷ್ಯರನ್ನು ರೂಪಿಸಿದ್ದಾರೆ. ಹಲವು ವಿಧದಲ್ಲಿ ಸಂಗೀತ ಕ್ಷೇತ್ರಕ್ಕೆ ಮೌಲಿಕ ಸೇವೆ ನೀಡಿರುವ ಇವರಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ವಿದ್ವಾನ್ ಮೈಸೂರು ಎ ರಾಧೇಶ ಇವರು ವಿದ್ವಾನ್ ಪಿ ಜಿ ಲಕ್ಷ್ಮೀನಾರಾಯಣ ಅವರಲ್ಲಿ ಶಿಕ್ಷಣವನ್ನು ಪಡೆದುಕೊಂಡು, ಈಗ ವಿದ್ವಾನ್ ಮನ್ನಾರ್‍ ಗುಡಿ ಈಶ್ವರನ್‍ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಹಿರಿಯ ಕಿರಿಯ ಕಲಾವಿದರಿಗೆ ಲಯವಾದ್ಯ ಸಹಕಾರ ನೀಡಿರುವ ಇವರು ಇಂದು ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ಕಲಾವಿದರಲ್ಲಿ ಒಬ್ಬರು.

ವಿದ್ವಾನ್ ಶರತ್ ಕೌಶಿಕ್ ತುಮಕೂರ್ ಬಿ. ರವಿಶಂಕರ್‍ ಅವರ ಶಿಷ್ಯರು. ವೃತ್ತಿಯಲ್ಲಿ ಇಂಜಿನಿಯರ್‍ ಆಗಿರುವ ಇವರು ಭರವಸೆ ಹುಟ್ಟಿಸಿರುವ ಲಯವಾದಕರು.  (ಎಸ್.ಎಚ್)

Leave a Reply

comments

Related Articles

error: