ಕ್ರೀಡೆದೇಶ

ಕೊಹ್ಲಿಯನ್ನು ಕೆಣಕಬೇಡಿ: ಅಮಿತಾಭ್ ಬಚ್ಚನ್ ಎಚ್ಚರಿಕೆ

ಮುಂಬೈ,ಡಿ.7-ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ನಡೆದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಕೊಹ್ಲಿಯನ್ನು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ವಿರಾಟ್ ಕೊಹ್ಲಿಯನ್ನು ಕೆಣಕಬೇಡಿ ಎಂದು ನಾನು ಎಷ್ಟು ಸಲ ಹೇಳಿದ್ದೇನೆ. ಆದರೆ ನೀವು ಕೇಳುವುದಿಲ್ಲ. ಈಗ ವಿರಾಟ್ ನಿಮಗೆ ಸರಿಯಾಗಿ ಉತ್ತರ ನೀಡಿದ್ದಾನೆ. ವಿಂಡೀಸರ ಮುಖಗಳನ್ನು ನೋಡಿ ಎಂದು ಬಿಗ್ ಬಿ ಬಚ್ಚನ್ ಅವರು ‘ಅಮರ್ ಅಕ್ಬರ್ ಅಂತೋನಿ’ ಶೈಲಿಯಲ್ಲಿ ವಿಂಡೀಸ್ ಬೌಲರ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅಮಿತಾಭ್ ಬಚ್ಚನ್ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ನಿಮ್ಮ ಈ ಡೈಲಾಗ್ ಇಷ್ಟವಾಯಿತು ಸರ್. ನೀವು ಯಾವಾಗಲೂ ನಮಗೆ ಸ್ಫೂರ್ತಿ ಎಂದಿದ್ದಾರೆ.

ವಿರಾಟ್ ಕೊಹ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಕೇವಲ 50 ಎಸೆತಗಳಲ್ಲಿ 94 ರನ್ ಬಾರಿಸಿ ಅಜೇಯರಾಗುಳಿದರು.

ಅಲ್ಲದೆ, ವಿಂಡೀಸ್ ನ ಕೆಸ್ರಿಕ್ ವಿಲಿಯಮ್ಸ್ ಓವರ್ ನಲ್ಲಿ 23 ರನ್ ಬಾರಿಸಿದ ಕೊಹ್ಲಿ, ವಿಲಿಯಮ್ಸ್ ವಿರುದ್ಧ ನೋಟ್ ಬುಕ್ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು. 2017ರಲ್ಲಿ ವಿಂಡೀಸ್ ಸರಣಿಯಲ್ಲಿ ಕೊಹ್ಲಿ ವಿಕೆಟ್ ಪಡೆದ ಕೆಸ್ರಿಕ್ ವಿಲಿಯಮ್ಸ್ ನೋಟ್ ಬುಕ್ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಇದಕ್ಕೆ ಈ ಸರಣಿಯಲ್ಲಿ ತಿರುಗೇಟು ನೀಡಿದ ಕೊಹ್ಲಿ ಹೈದರಾಬಾದ್ ಮೈದಾನದಲ್ಲಿ ಸಂಭ್ರಮಾರಣೆ ಮಾಡಿದ್ದರು. (ಎಂ.ಎನ್)

Leave a Reply

comments

Related Articles

error: