ಮೈಸೂರು

ಅಧ್ಯಕ್ಷರ ನೇಮಕಾತಿಗೆ ವಿರೋಧವಿದೆ : ದೇವರಾಜು ಮುಳ್ಳೂರು

ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಇಲವಾಲ ಬ್ಲಾಕ್ ಸಮಿತಿಗೆ ಅಧ್ಯಕ್ಷರ ನೇಮಕಾತಿ ಬಗ್ಗೆ ದಲಿತ ಮುಖಂಡರ ವಿರೋಧವಿದೆ ಎಂದು ದಲಿತ ಸಮುದಾಯದ ಕಾಂಗ್ರೆಸ್ ಮುಖಂಡ ದೇವರಾಜು ಮುಳ್ಳೂರು ಹೇಳಿದರು.

ಶನಿವಾರ ನಗರದ ಪತ್ರಕರ್ತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲವಾಲ ಬ್ಲಾಕ್ ಸಮಿತಿಗೆ ದಲಿತ ಮುಖಂಡರ ಪೈಕಿ ಯಾರಾದರೂ ಒಬ್ಬರನ್ನು ನೇಮಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಶಿಫಾರಸ್ಸು ಮಾಡಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ದಲಿತ ಮುಖಂಡರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರೂ ಸಹ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಈ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗಾಗಿ ದುಡಿಯುತ್ತಿರುವ ದಲಿತ ಮುಖಂಡರ ಏಳಿಗೆ ಸಹಿಸದೆ ಯಾರ ಗಮನಕ್ಕೂ ತರದೆ ತಮ್ಮ ಸ್ವ ಇಚ್ಛೆಯಿಂದ ಪಕ್ಷದ ಸದಸ್ಯತ್ವವನ್ನು ಪಡೆಯದೆ ಇರುವ ಕಲ್ಲಹಳ್ಳಿ ಕೆ.ಎಸ್. ಸಿದ್ದರಾಜು ಅವರನ್ನು ಕೆ.ಪಿ.ಸಿ.ಸಿ ಸರ್ವ ಸಮ್ಮತವಾದ ವ್ಯಕ್ತಿಯೆಂದು ಸುಳ್ಳುಮಾಹಿತಿ ನೀಡಿ ಇಲವಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕಾತಿ ಆದೇಶ ಪಡೆದಿದ್ದಾರೆ ಎಂದು ಆರೋಪಿಸಿದರು.

ಕೆ.ಮರೀಗೌಡರು ನೇಮಿಸಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ವರಿಷ್ಠರು ಈ ಕೂಡಲೇ ರದ್ದು ಪಡಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪರಿಶಿಷ್ಟ ಜಾತಿಯ ಬ್ಲಾಕ್ ಕಾಂಗ್ರೆಸ್ ಅಧ‍್ಯಕ್ಷ ಎಸ್.ಶಿವಣ್ಣ, ಮಹೇಶ್, ನಿಂಗರಾಜು, ಸ್ವಾಮಿ ಹಾಜರಿದ್ದರು.

Leave a Reply

comments

Related Articles

error: