ಮೈಸೂರು

ತಾಯಿಯನ್ನು ಕಳೆದುಕೊಂಡು ಮರಿ ಕೋತಿಯ ರೋದನ

ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡ ಕೋತಿ ಮರಿಯೊಂದು ರೋದಿಸುತ್ತಿರುವ ಮನ ಕಲಕುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ನಡೆದಿದೆ.

ಶನಿವಾರ  ಬೆಳಿಗ್ಗೆ ರಸ್ತೆ ಬದಿಯಲ್ಲಿ ಕೋತಿ, ತನ್ನ ಮರಿಗಳೊಂದಿಗೆ ಆಟವಾಡುತ್ತಿತ್ತು. ಈ ಸಂದರ್ಭದಲ್ಲಿ ವೇಗವಾಗಿ ಬಂದ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ತಾಯಿ ಕೋತಿ ಸಾವನ್ನಪ್ಪಿದೆ. ಈ ವೇಳೆ ಜೊತೆಯಿದ್ದ ಕೋತಿ ಮರಿ ತನ್ನ ತಾಯಿಯನ್ನು ಕಳೆದುಕೊಂಡು ದುಃಖದಿಂದ ರೋದಿಸುತ್ತಿತ್ತು. ಈ ದೃಶ್ಯ ಅಕ್ಕಪಕ್ಕದಲ್ಲಿದ್ದವರ ಮನ ಕಲಕುವಂತಿತ್ತು.ಸಾವನ್ನಪ್ಪಿದ ಕೋತಿಯನ್ನು ಸ್ಥಳದಿಂದ ತೆರವು ಮಾಡುವುದಕ್ಕೆ ಸಾರ್ವಜನಿಕರು ಎಷ್ಟೆ ಪ್ರಯತ್ನಿಸಿದರೂ, ಜನರನ್ನು ಹತ್ತಿರ ಹೋಗಲು  ಬಿಡದೆ ಮರಿ ಕೋತಿ ರೋಧಿಸುತ್ತಿತ್ತು. ಕೋತಿ ಮಾರುತಿಯ ಸ್ವರೂಪವಾದ್ದರಿಂದ ಸಾರ್ವಜನಿಕರು ಅದಕ್ಕೆ ಪೂಜೆ, ಪುನಸ್ಕಾರ ಸಲ್ಲಿಸಿ, ನಂತರ ವಿಧಿ ವಿಧಾನದ ಮೂಲಕ ಅಂತ್ಯ ಸಂಸ್ಕಾರ ಮಾಡಿದರು.

Leave a Reply

comments

Related Articles

error: