ಮೈಸೂರು

ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ : ಯೋಗ ಪಟು ಖುಷಿ

ಮೈಸೂರು,ಡಿ.8:- ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮೈಸೂರಿನ ರೋಟರಿ ಐಡಿಯಲ್ ಜಾವ ಸಭಾಂಗಣದಲ್ಲಿಂದು  ಕನ್ನಡ ರಾಜ್ಯೋತ್ಸವ ಮಕ್ಕಳ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಮಕ್ಕಳಿಗೆ ಬಾಲಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅಂತರರಾಷ್ಟ್ರೀಯ ಯೋಗಪಟು   ಖುಷಿ 3 ವರ್ಷಗಳ ಹಿಂದೆ ಪ್ರಶಸ್ತಿ ತೆಗೆದುಕೊಳ್ಳಲು ಕೂತಿದ್ದೆ. ಅವರ ಆಶೀರ್ವಾದದಿಂದ ಇಂದು ಉದ್ಘಾಟಕಿಯಾಗಿ ಆಗಮಿಸಿದ್ದು ಖುಶಿ ತಂದಿದೆ ಎಂದರು. ಅಲ್ಲದೆ ಕರ್ನಾಟಕ ಸರ್ಕಾರ ಕೂಡ ನನಗೆ ಈ ಚಿಕ್ಕ ವಯಸಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ಸಂತಸ ತಂದಿದೆ ಎಂದರು. ಜೊತೆಗೆ ಯೋಗ ನಮ್ಮ ಆರೋಗ್ಯವನ್ನು ವೃದ್ದಿಸುತ್ತದೆ. ನನಗೆ ಉಸಿರಾಟದ ಸಮಸ್ಯೆ ಇತ್ತು. ಆಗ ನಾನು ಯೋಗಾಭ್ಯಾಸ ಆರಂಭಿಸಿದೆ. ಇದೀಗ ನಾನು ಆರೋಗ್ಯವಾಗಿದ್ದೇನೆ ಎಂದರು. ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ಅವರು ಮುಂದೊಂದು ದಿನ ದೇಶದ ಆಸ್ತಿಯಾಗುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೀನಹಳ್ಳಿ ಸಿದ್ದಪ್ಪ , ಪ್ರತಿಷ್ಠಾನದ ಅಧ್ಯಕ್ಷರಾದ ಸಂತೋಷ್ ಸೇರಿದಂತೆ ಸಮಿತಿಯ ಇನ್ನಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: