ಮೈಸೂರು

ಮೈಸೂರಿನ ರೆಜೆಂಟಾ ಸೆಂಟ್ರಲ್ ಹೆರಾಲ್ಡ್ ನಲ್ಲಿ ಟೂರ್ ಆಫ್ ನೀಲಗಿರೀಸ್ 2019ಗೆ ಚಾಲನೆ

ಮೈಸೂರು, ಡಿ.9:-  ರೈಡ್ ಎ ಸೈಕಲ್ ಫೌಂಡೇಷನ್ (ಆರ್‍ಎಸಿ-ಎಫ್) ಆಯೋಜಿಸಿರುವ ಭಾರತದ ಅತ್ಯಂತ ದೊಡ್ಡ ಹಾಗೂ ಪ್ರೀತಿಪಾತ್ರವಾದ ಸೈಕಲ್ ಯಾತ್ರ್ರೆ ಟೂರ್ ಆಫ್ ನೀಲಗಿರೀಸ್ (ಟಿನ್‍ಎಫ್‍ಎನ್)ಗೆ ನಿನ್ನೆ  ಮೈಸೂರಿನ ಸೆಂಟ್ರಲ್ ಹೆರಾಲ್ಡ್‍ನಲ್ಲಿ ಚಾಲನೆ ನೀಡಲಾಯಿತು.

ಮೈಸೂರಿನಿಂದ ಆರಂಭಿಸಿ ಸೈಕ್ಲಿಸ್ಟ್‍ ಗಳು ಹಾಸನ, ಚಿಕ್ಕಮಗಳೂರು, ಕುಶಾಲನಗರ, ಸುಲ್ತಾನ್ ಬತ್ತೇರಿ, ಉದಕಮಂಡಲಂ (ಊಟಿ) ಮೂಲಕ ಯಾತ್ರೆ ಕೈಗೊಂಡು ಡಿಸೆಂಬರ್ 15ಕ್ಕೆ ಮೈಸೂರಿಗೆ ಮರಳಲಿದ್ದಾರೆ.

ಮೊದಲ ದಿನ ಸೈಕ್ಲಿಸ್ಟ್‍ ಗಳು 131 ಕಿಲೋಮೀಟರ್ ಸವಾರಿ ಕೈಗೊಂಡು ಕೆ.ಆರ್.ನಗರ, ಹೊಳೆನರಸೀಪುರ ಮೂಲಕ ಹಾಸನಕ್ಕೆ ಆಗಮಿಸಲಿದ್ದಾರೆ. ರಾತ್ರಿ ಹಾಸನದಲ್ಲಿ ವಾಸ್ತವ್ಯ ಹೂಡಿ 2ನೇ ದಿನ ಚಿಕ್ಕಮಗಳೂರಿಗೆ 118 ಕಿಲೋಮೀಟರ್ ಯಾತ್ರೆ ಕೈಗೊಳ್ಳುವರು. ಎಂಟನೇ ದಿನ ಸೈಕ್ಲಿಸ್ಟ್‍  ಗಳು ಇಡೀ ಸವಾರಿ ಪೂರ್ಣಗೊಳಿಸಿ ಊಟಿಯಿಂದ 90 ಕಿಲೋಮೀಟರ್ ಅಂತರ ಕ್ರಮಿಸಿ ಮೈಸೂರಿಗೆ ಮರಳುವರು.

ಆರ್‍ಎಸಿ-ಎಫ್ ಸಹಸಂಸ್ಥಾಪಕ ದೀಪಕ್ ಮಾಜಿಪಾಟೀಲ್ ಅವರು ಹೇಳುವಂತೆ, “ಅತ್ಯುತ್ತಮ ಸೈಕ್ಲಿಸ್ಟ್‍ ಗಳನ್ನು ಆಕರ್ಷಿಸುವ ಮತ್ತು ಉತ್ತಮ ಸ್ವಯಂಸೇವಾ ಬೆಂಬಲ ಪಡೆಯುವ ಉತ್ತಮ ಅದೃಷ್ಟ ನಮ್ಮದಾಗಿದೆ. ಇದರಿಂದಾಗಿ ನಾವು ಇಂಥ ವೃತ್ತಿಪರ ಯಾತ್ರೆ ಸಂಘಟಿಸುವುದು ಸಾಧ್ಯವಾಗಿದೆ. ಸೈಕಲ್ ಸವಾರರು ದೇಶದ ಅತ್ಯಂತ ಶ್ರೇಷ್ಠ ಪರಿಸರ ಮತ್ತು ಸವಾಲುದಾಯಕ ಅನುಭವವನ್ನು ಪಡೆಯಲಿದ್ದು, ಇದು ಅವರ ಇತಿ ಮಿತಿಗಳಿಗೆ ಪರೀಕ್ಷೆಯಾಗಿದೆ”

ಉತ್ತಮ ಸಾಮಾಜಿಕ ಕಾರಣಕ್ಕೆ ಬದ್ಧತೆಯ ಅಂಗವಾಗಿ ಸೈಕಲ್ ಸವಾರರು ಎಲ್ಲ ಆವೃತ್ತಿಗಳಲ್ಲೂ ನಿಧಿ ಸಂಗ್ರಹಿಸಿದ್ದು, ಇದಕ್ಕೆ 12ನೇ ಆವೃತ್ತಿ ಕೂಡಾ ಹೊರತಾಗಿಲ್ಲ. ಈ ಆವೃತ್ತಿಯಲ್ಲಿ ಇಕ್ಷಾ ಫೌಂಡೇಷನ್, ಕೆನೆತ್ ಆ್ಯಂಡರ್‍ಸನ್ ನೇಚರ್ ಸೊಸೈಟಿ ಮತ್ತು ಸೀತಾ ಭತೇಜಾ ಸ್ಪೆಷಾಲಿಟಿ ಆಸ್ಪತ್ರೆ ಹೀಗೆ ಮೂರು ಸಾಮಾಜಿಕ ಸಂಸ್ಥೆಗಳ ಸೈಕ್ಲಿಸ್ಟ್‍ ಗಳು ಸವಾರಿ ಮಾಡುತ್ತಿದ್ದಾರೆ.

ಬ್ರಿಗೇಡಿಯರ್ ರಾಜಾ ಭಟ್ಟಾಚಾರ್‍ಜೀ ಅವರು ಇಷ್ಕಾ ಫೌಂಡೇಷನ್‍ಗೆ ನಿಧಿ ಸಂಗ್ರಹಿಸುವ ಸಲುವಾಗಿ ಸವಾರಿ ಕೈಗೊಳ್ಳುವರು. ರಾಜಾ ಅವರು ಕಣ್ಣಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಕಾಯುತ್ತಿರುವ ಮಕ್ಕಳ ನೆರವಿನ ಕಾರಣಕ್ಕಾಗಿ ನಿಧಿ ಸಂಗ್ರಹ ಮಾಡುವರು. ಈ ನಿಟ್ಟಿನಲ್ಲಿ ರಾಜಾ ಅವರು ಕನಿಷ್ಠ ಆರು ಲಕ್ಷ ರೂಪಾಯಿಗಳನ್ನು ಸಂಗ್ರಹಿಸುವ ಗುರಿ ಹೊಂದಿದ್ದು, ಇಷ್ಕಾ ಫೌಂಡೇಷನ್ ಮೂಲಕ ಮಗುವಿಗೆ ಹೊಸ ಬೆಳಕು ಕಾಣಿಸುವ ನಿರೀಕ್ಷೆ ಹೊಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: