ಪ್ರಮುಖ ಸುದ್ದಿಮನರಂಜನೆ

28 ದಿನಗಳ ಆಸ್ಪತ್ರೆವಾಸದ ಬಳಿಕ ಗುಣಮುಖರಾಗಿ ಮನೆಗೆ ತೆರಳಿದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್

ದೇಶ(ನವದೆಹಲಿ)ಡಿ.9:- ಅನಾರೋಗ್ಯದ ಹಿನ್ನೆಲೆಯಲ್ಲಿ  ಕಳೆದ 28 ದಿನಗಳಿಂದ  ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

28 ದಿನಗಳ ನಂತರ ಅವರು ಮನೆಗೆ ಮರಳಿದ್ದು, ಖುದ್ದು ಲತಾ  ಮಂಗೇಶ್ಕರ್ ಅವರೇ ಈ ಮಾಹಿತಿಯನ್ನು ಟ್ವೀಟ್ ಮಾಡುವ ಮೂಲಕ ನೀಡಿದ್ದಾರೆ.  ಲತಾ ಮಂಗೇಶ್ಕರ್ ಏಕಕಾಲದಲ್ಲಿ ಹಲವಾರು ಟ್ವೀಟ್ ಮಾಡಿದ್ದಾರೆ. ಮೊದಲ ಟ್ವೀಟ್‌ನಲ್ಲಿ ಹಲೋ ಎಂದು ಬರೆದಿದ್ದಾರೆ.

ನಾನು ಕಳೆದ 28 ದಿನಗಳಿಂದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿದ್ದೆ. ನನಗೆ ನ್ಯುಮೋನಿಯಾ ಇತ್ತು. ನಾನು ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕು. ನಂತರ ಮನೆಗೆ ಹೋಗಬೇಕು ಎಂದು ವೈದ್ಯರು ಬಯಸಿದ್ದರು, ಇಂದು ನಾನು ಮನೆಗೆ ಮರಳಿದ್ದೇನೆ. ದೇವರ ಪ್ರಾರ್ಥನೆ ಮತ್ತು ಆಶೀರ್ವಾದ,   ಬಾಬಾ ಮತ್ತು ನಿಮ್ಮೆಲ್ಲರ ಪ್ರೀತಿಯಿಂದ ನಾನು ಈಗ ಚೆನ್ನಾಗಿದ್ದೇನೆ. ನಿಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: