ಪ್ರಮುಖ ಸುದ್ದಿ

ಕೇಂದ್ರದ ಮಾಜಿ ಸಚಿವ ಅರುಣ್ ಶೌರಿಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ದೇಶ(ಪುಣೆ)ಡಿ.9:- ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೇಂದ್ರದ ಮಾಜಿ ಸಚಿವ ಅರುಣ್ ಶೌರಿಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಪುಣೆಯ ರೂಬಿ ಹಾಲ್ ಚಿಕಿತ್ಸಾಲಯದಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ    ಪುಣೆಯ ಮಾಜಿ ಕೇಂದ್ರ ಸಚಿವ ಅರುಣ್ ಶೌರಿಯನ್ನು ಭೇಟಿಯಾದೆ ಎಂದು ಪಿಎಂ ಮೋದಿ ಹೇಳಿದ್ದಾರೆ.  ಅವರ ಆರೋಗ್ಯದ ಬಗ್ಗೆ ತಿಳಿದುಕೊಂಡಿದ್ದಲ್ಲದೇ, ಶೌರಿ ಅವರು ಪಿಎಂ ಮೋದಿಯವರೊಂದಿಗೆ  ಉತ್ತಮ ಸಂಭಾಷಣೆ ನಡೆಸಿದ್ದಾರೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾವು ಪ್ರಾರ್ಥಿಸುತ್ತೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಇಂಡಿಯಾ ಟುಡೆ ಜೊತೆ ಮಾತನಾಡುತ್ತಾ, ಅರುಣ್ ಶೌರಿ ಒಂದು ವಾರದ ಹಿಂದೆ ತನ್ನ ಲಾವಸಾ ಬಂಗಲೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಜಾರಿಬಿದ್ದು ಅನಾರೋಗ್ಯಕ್ಕೀಡಾಗಿದ್ದರು.  ಅವರು ಫಿಟ್ ಮತ್ತು ಫೈನ್ ಆಗಿದ್ದು ಶೀಘ್ರದಲ್ಲೇ ಡಿಸ್ಚಾರ್ಜ್ ಆಗುತ್ತಾರೆ ಎನ್ನಲಾಗಿದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಶೌರಿ ಅವರು ಮೋದಿ ಸರ್ಕಾರವನ್ನು ಬಹಿರಂಗವಾಗಿ ಟೀಕಿಸಿದ್ದರು ಮತ್ತು ಈ ವಿಷಯದ ಬಗ್ಗೆ ಬಹಳ ಧ್ವನಿ ಎತ್ತಿದ್ದರು. ಕಡುಟೀಕಾರರಾಗಿದ್ದ ಶೌರಿ ಅವರನ್ನು ಭೇಟಿ ಮಾಡಿದ್ದಕ್ಕೆ ಪ್ರಧಾನಿಯವರಿಗೆ ಎಲ್ಲೆಎಡೆಯಿಮದ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ಎಸ್.ಎಚ್)

Leave a Reply

comments

Related Articles

error: