ಪ್ರಮುಖ ಸುದ್ದಿ

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಸಹೋದರಿ ಶೈಮಾ ತಮಾಶಿ ನಿಧನ

ದೇಶ(ನವದೆಹಲಿ)ಡಿ.9:-  ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಸಹೋದರಿ ಶೈಮಾ ತಮಾಶಿ ನಿಧನರಾಗಿದ್ದಾರೆ.   ಅವರು ಕಳೆದ ಎಂಟು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ್ದರು.

ಅವರು ಪುಣೆಯಲ್ಲಿ ತಮ್ಮ ಕೊನೆಯುಸಿರೆಳಿದ್ದಾರೆ ಎನ್ನಲಾಗಿದ್ದು,  ನವಾಜುದ್ದೀನ್ ಸಿದ್ದಿಕಿ ಚಿತ್ರೀಕರಣದಿಂದಾಗಿ  ಯುಎಸ್ ನಲ್ಲಿದ್ದು,  ಈ ಮಾಹಿತಿಯನ್ನು ಅವರ ಕಿರಿಯ ಸಹೋದರ ಅಯಾಜುದ್ದೀನ್ ನೀಡಿದ್ದಾರೆ.

ನವಾಜುದ್ದೀನ್ ಅವರ ಸಹೋದರಿ ಶೈಮಾ ಅವರಿಗೆ 18 ನೇ ವಯಸ್ಸಿನಿಂದಲೂ ಸ್ತನ ಕ್ಯಾನ್ಸರ್ ಇತ್ತು.   ಅವರು ಕಳೆದ 8 ವರ್ಷಗಳಿಂದ ಕ್ಯಾನ್ಸರ್ ವಿರುದ್ಧ  ಹೋರಾಟ ನಡೆಸಿದ್ದರು.   ಅವರ ಅಂತಿಮ ವಿಧಿ ವಿಧಾನವು ಉತ್ತರಪ್ರದೇಶದ ಬುಧಾನಾ ದಲ್ಲಿ ನಡೆಯಲಿದೆ. (ಎಸ್.ಎಚ್)

Leave a Reply

comments

Related Articles

error: