ಮನರಂಜನೆ

ಮಹೇಶ್‌ಬಾಬು ಜತೆ ಶ್ರೀದೇವಿ ಪುತ್ರಿ ನಟಿಸುತ್ತಿಲ್ಲ

ಶ್ರೀದೇವಿ ಭಾರತೀಯ ಚಿತ್ರರಂಗವನ್ನು ಒಂದು ಕಾಲದಲ್ಲಿ ಆಳಿದ ನಾಯಕಿ. ತನ್ನ ಚೆಲುವಿನಿಂದ ಸಾಕಷ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದರು. ಈಗ ಅವರ ಮಗಳ ಸರದಿ ಬಂದಿದೆ. ಆದರೆ ಅದಕ್ಕಿನ್ನೂ ಕಾಲವೇ ಕೂಡಿ ಬಂದಂತಿಲ್ಲ. ಇತ್ತೀಚಿಗೆ ಸುದ್ದಿಯಾಗಿದ್ದಂತೆ ತೆಲುಗಿನ ಪ್ರಿನ್ಸ್ ಮಹೇಶ್ ಬಾಬುಗೆ ನಿರ್ದೇಶಕ ಮುರುಗದಾಸ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ಶ್ರೀದೇವಿ ಪುತ್ರಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳು ಎಂಬುದನ್ನು ಸ್ವತಃ ನಿರ್ದೇಶಕ ಮುರಘದಾಸ್ ಸ್ಪಷ್ಟಪಡಿಸಿದ್ದಾರೆ. ಬಗ್ಗೆ ಸ್ಪಷ್ಟೀಕರಣ ನೀಡಿರುವ ನಿರ್ದೇಶಕರು, ‘ಚಿತ್ರದ ಆರಂಭಿಕ ಹಂತದಲ್ಲಿ ಜಾಹ್ನವಿ ಹೆಸರು ಪ್ರಸ್ತಾಪವಾಗಿದ್ದೇನೋ ಹೌದು. ಆದರೆ ನಾವು ಆಕೆಯನ್ನು ಭೇಟಿ ಮಾಡಲೇ ಇಲ್ಲ. ಹಾಗಾಗಿ ನಮ್ಮ ಚಿತ್ರದಲ್ಲಿ ಜಾಹ್ನವಿ ನಟಿಸುತ್ತಿಲ್ಲಎಂದಿದ್ದಾರೆ.

ತಮ್ಮ ಪುತ್ರಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿಯ ಬಗ್ಗೆ ನಟಿ ಶ್ರೀದೇವಿ ಅವರಿಂದಲೂ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ. ಶ್ರೀದೇವಿ ಆಪ್ತರ ಪ್ರಕಾರ, ನಟಿಗೆ ತಮ್ಮ ತವರಾದ ದಕ್ಷಿಣದ ಸಿನಿಮಾ ಮೂಲಕ ಪುತ್ರಿಯನ್ನು ತೆರೆಗೆ ತರುವ ಇರಾದೆ ಇದೆಯಂತೆ. ಆದರೆ ಶ್ರೀದೇವಿ ಪತಿ, ನಿರ್ಮಾಪಕ ಬೋನಿ ಕಪೂರ್ಗೆ ಬಾಲಿವುಡ್ ಮೇಲೆ ವ್ಯಾಮೋಹ. ಹಿಂದಿ ಸಿನಿಮಾ ಮೂಲಕವೇ ತಮ್ಮ ಪುತ್ರಿ ತೆರೆಗೆ ಬರಲಿ ಎನ್ನುವುದು ಅವರ ಆಶಯ. ಎಲ್ಲವೂ ಅಂದುಕೊಂಡಂತೆಯೇ ಆದರೆ ಕರಣ್ ಜೋಹರ್ ನಿರ್ದೇಶನದಲ್ಲಿ ತಯಾರಾಗಲಿರುವಸ್ಟೂಡೆಂಟ್ ಆಫ್ ದಿ ಯಿಯರ್ – 2’ ಸರಣಿ ಹಿಂದಿ ಸಿನಿಮಾದೊಂದಿಗೆ ಜಾಹ್ನವಿ ಬೆಳ್ಳಿತೆರೆ ಪ್ರವೇಶಿಸುವ ಸಾಧ್ಯತೆಗಳಿವೆ.

ಇದೆಲ್ಲದರ ನಡುವೆ ಜಾಹ್ನವಿ ತಮ್ಮ ಬಾಯ್ಫ್ರೆಂಡ್ ಜತೆಗಿನ ಫೋಟೋಗಳ ಮೂಲಕ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದರು. ಬಾಯ್ಫ್ರೆಂಡ್ ಶಿಖರ್ ಪಹಾರಿಯಾಗೆ ಲಿಪ್ಲಾಕ್ ಮಾಡುವ ಜಾಹ್ನವಿ ಫೋಟೋಗಳು ಇಂಟರ್ನೆಟ್ನಲ್ಲಿ ಓಡಾಡಿದ್ದು ಶ್ರೀದೇವಿಬೋನಿಕಪೂರ್ ದಂಪತಿಗೆ ತಲೆನೋವಾಗಿತ್ತು. ಬಗ್ಗೆ ಮಾಧ್ಯಮಗಳಿಗೆ ಮಾತನಾಡಿದ್ದ ಶ್ರೀದೇವಿ ನನ್ನ ಮಗಳಿಗೆ ಜವಾಬ್ದಾರಿಯಿದೆ. ನಾವು ಕುರಿತಾಗಿ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಪ್ರಕರಣಕ್ಕೆ ಹೆಚ್ಚಿನ ಒತ್ತು ಕೊಡುವ ಅಗತ್ಯವಿಲ್ಲ  ಎಂದಿದ್ದರು. ಆದರೆ ಈಗ ಶ್ರೀದೇವಿ ಪುತ್ರಿ ಯಾವ ಸಿನಿಮಾ ಮೂಲಕ ಬೆಳ್ಳಿತೆರೆಗೆ ಬರುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

Leave a Reply

comments

Related Articles

error: