ಮೈಸೂರು

ಮೃಗಾಲಯದಲ್ಲಿನ್ನು ಸಿಂಹ ಗರ್ಜನೆ

ಮೈಸೂರು ಮೃಗಾಲಯ ವೀಕ್ಷಿಸಲು ತೆರಳುವ ಪ್ರವಾಸಿಗರಿಗೆ ಇನ್ನು ಕೇಸರ ಗರ್ಜನೆ ಕೇಳಿಸಲಿದೆ, ಯಾಕೆಂದರೆ ಮೈಸೂರು ಮೃಗಾಲಯಕ್ಕೆ ಶೀಘ್ರದಲ್ಲೆ ಗಂಡು ಸಿಂಹ ಆಗಮನವಾಗಲಿದೆ.

ಮೈಸೂರು ಮೃಗಾಲಯಕ್ಕೆ  ಗುಜರಾತ್ ರಾಜ್ಯದಿಂದ ಶೌರ್ಯ ಹೆಸರಿನ ಸಿಂಹವನ್ನು ತರಲಾಗುತ್ತಿದೆ. ಶನಿವಾರ ಗುಜರಾತ್ ನಿಂದ ಶೌರ್ಯ ಹೆಸರಿನ ಕೇಸರ ಪಯಣ ಬೆಳೆಸಿದ್ದು, ಇನ್ನು ಮೂರು ದಿನದಲ್ಲಿ ಮೈಸೂರಿನ ಮೃಗಾಲಯಕ್ಕೆ ಆಗಮಿಸಲಿದೆ.

ಮೈಸೂರಿನ ಮೃಗಾಲಯಕ್ಕೆ  ಹಲವು ದಿನಗಳ ನಂತರ ಸಿಂಹದ ಆಗಮನವಾಗಲಿದೆ. ಶೌರ್ಯ ಕೇಸರವು  ಗುಜರಾತ್ ಮೃಗಾಲಯದಲ್ಲಿ ಅತ್ಯಂತ ಪ್ರಸಿದ್ದವಾಗಿದೆ.

ಮೃಗಾಲಯದ ಸಿಬ್ಬಂದಿಗಳು ಶೌರ್ಯನನ್ನು ವೀಕ್ಷಿಸಲು ಕೌತುಕರಾಗಿದ್ದಾರೆ. ಒಟ್ಟಿನಲ್ಲಿ ಇನ್ನು ಮುಂದೆ ಮೃಗಾಲಯದಲ್ಲಿ ಶೌರ್ಯನ ಗರ್ಜನೆ ಕೇಳಿಸಲಿದೆ.

Leave a Reply

comments

Related Articles

error: