ಮೈಸೂರು

27ನೇ ವರ್ಷದ ಕ್ರಿಸ್ಮಸ್ ಕ್ಯಾರೋಲ್ ಗಾಯನ ಸ್ಪರ್ಧೆ : ವಿಜೇತರಿಗೆ ಬಹುಮಾನ ವಿತರಣೆ

ಮೈಸೂರು,ಡಿ.9:- ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಮಲ್ ಕ್ಯಾಥೋಲಿಕ್  ಅಸೋಸಿಯೇಷನ್ ಅವರು 27ನೇ ವರ್ಷದ ಕ್ರಿಸ್ಮಸ್ ಕ್ಯಾರೋಲ್ ಗಾಯನ ಸ್ಪರ್ಧೆಯನ್ನು ನಿನ್ನೆ ಟೆರೆಷಿಯನ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದರು.

ಇದು ಕ್ರಿಸ್ತನ ಶಾಂತಿ ಮತ್ತು ಸೌಹಾರ್ದತೆಯ ಪ್ರತೀಕವಾಗಿದೆ.  ಇದು ಶಾಂತಿ ದೂತ ಕ್ರಿಸ್ತನ ಪ್ರೀತಿ ಮತ್ತು ಸಹನೆಯ ಸಂಕೇತವಾಗಿ ಜಾತಿ, ಮತ ಮತ್ತು ಭಾಷೆಗಳ ಭೇದವಿಲ್ಲದೆ ಕ್ರಿಸ್ತ ಜನನದ ಸಂದೇಶವನ್ನು ಎಲ್ಲೆಡೆ ಹರಡುವ ಒಂದು ಸ್ಪರ್ಧೆಯಾಗಿದೆ. ಇದು ಸ್ಪರ್ಧೆ ಮಾತ್ರವಲ್ಲದೆ ಕ್ರಿಸ್ತನ ಸಂದೇಶವನ್ನು ಹರಡುವ ಒಂದು ಸುಸಂದರ್ಭವಾಗಿದೆ.

ಇದು ಸರ್ವ ಧರ್ಮಗಳ ನಂಬಿಕೆ ಮತ್ತು ವಿಶ್ವಾಸವನ್ನು ಒಂದುಗೂಡಿಸಿ ಕ್ರಿಸ್ತನ ಜನನದ ಸಂದೇಶವನ್ನು ಜನರ ಮನಸ್ಸಿನಲ್ಲಿ ಮೂಡಿಸುವ ಶುಭವಾರ್ತೆ ಕೂಡ ಆಗಿದೆ.

ಈ ಸ್ಪರ್ಧೆಗೆ ಕನ್ನಡ, ಆಂಗ್ಲ, ಕೊಂಕಣಿ, ಮಲೆಯಾಳಂ, ತಮಿಳು ಹಾಗೂ ಭಾರತದ ಯಾವುದೇ ಭಾಷೆಗಳ ಭೇದವಿಲ್ಲದೆ ಹಾಡಬಹುದು. ಈ ಸ್ಪರ್ಧೆಯನ್ನು 12ವಿಭಾಗದಲ್ಲಿ ಆಯೋಜಿಸಿ ಇದನ್ನು ಚಿಕ್ಕಮಕ್ಕಳಿಂದ ಪ್ರೈಮರಿ, ಹೈಯರ್ ಪ್ರೈಮರಿ, ಪ್ರೌಢಶಾಲೆ , ಕಾಲೇಜು ಮತ್ತು ಇತರ ಧಾರ್ಮಿಕ ಸಂಸ್ಥೆಗಳ ದೇವಾಲಯಗಳು ಹೀಗೆ ವಿವಿಧತೆಯಲ್ಲಿ ವೈವಿಧ್ಯ ಎಂಬಂತೆ ಸುಮಾರು 95ಗುಂಪುಗಳಲ್ಲಿ ಹಾಡಿದ್ದರು. ಒಂದೊಂದು ಗುಂಪಿನಲ್ಲಿ 30ರಿಂದ 50ಮಂದಿ ಭಾಗವಹಿಸಿ ಸುಮಾರು 4000 ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಬೆಳಿಗ್ಗೆ 9ಗಂಟೆಯಿಂದ ಪ್ರಾರಂಭವಾಗಿ ಸಂಜೆ 6.30ರವರೆಗೆ ನಡೆಯಿತು. ಗೆದ್ದ ಸ್ಪರ್ಧಾರ್ಥಿಗಳಿಗೆ ಅತಿಥಿಗಳಿಂದ ಬಹುಮಾನ ವಿತರಣೆಯೊಂದಿಗೆ ವರ್ಣರಂಜಿತ ಕಾರ್ಯಕ್ರಮಕ್ಕೆ ತೆರೆ ಬಿತ್ತು.

ಈ ವರ್ಣರಂಜಿತ ಕಾರ್ಯಕ್ರಮವನ್ನು ವಂ.ಸ್ಟಾ. ಥೋಮಸ್ ತನ್ನಟ್ಟಿಲ್ ಆಗುಸ್ತಿ ಉದ್ಘಾಟಿಸಿದರು.  ವಂ.ಸ್ಟಾ.ರೆನಿಕ್ ವರ್ಗೀಸ್ ಪುತುಶೇರಿ ಸಿಎಂಐ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಿಸಿಎ ಅಧ್ಯಕ್ಷರಾದ  ಮಿ.ಸೋನೆಫ್ ಚಾಕೋ ಕಾರ್ಯಕ್ರಮ ನಡೆಸಿಕೊಟ್ಟರು.

ಬಹುಮಾನ ವಿತರಣಾ ಸಮಾರಂಭ  ಮೈಸೂರಿನ ಧರ್ಮಾಧ್ಯಕ್ಷರಾದ ಅತಿವಂದನೀಯ ಡಾ.ಕೆ.ಎ.ವಿಲಿಯಂ ನೇತೃತ್ದಲ್ಲಿ ನಡೆದಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ನಾಗೇಶ್ ವಿ.ಬೆಟ್ಟಕೋಟೆ ಮುನ್ನಡೆಸಿದ್ದು, ಸಂಘದ ಮಾರ್ಗದರ್ಶಕರಾದ ವಂದನೀಯ ಗುರು ವರ್ಗೀಸ್ ಕಳಮ್ ಪರಂಪಿಲ್ ಸಿಎಂಐ ಪ್ರೂವಿನ್ಸಿಯಲ್ ಸೆಂಟ್ ಪೌಲ್ಸ್ ಪ್ರಾವಿನ್ಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಈ ಸಂದರ್ಭ ಕಾರ್ಯದರ್ಶಿ ಎಂ.ಕೆ.ಜೊಣಿ, ವ್ಯವಸ್ಥಾಪಕ ವೈ.ಅಂಥೋಣಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

 

 

Leave a Reply

comments

Related Articles

error: