ಮೈಸೂರು

ದೇಶದ ಸಾಮಾಜಿಕ ಭವಿಷ್ಯ ಅಪಾಯದ ಸ್ಥಿತಿಯಲ್ಲಿದೆ : ಡಾ.ಸಿ.ಪಿ.ಕೆ

ದೇಶ ಪ್ರೇಮ ಯಾರಿಗೂ ಇಲ್ಲ. ದ್ವೇಷ ಬೆಳಸಿಕೊಳುತ್ತಿದ್ದಾರೆ, ದೇಶದ ಸಾಮಾಜಿಕ ಭವಿಷ್ಯ ಬಹಳ ಅಪಾಯದ ಸ್ಥಿತಿಯಲ್ಲಿದೆ ಎಂದು ಆತಂಕ  ಸಾಹಿತಿ ಡಾ. ಸಿ.ಪಿ.ಕೆ ಆತಂಕ ವ್ಯಕ್ತ ಪಡಿಸಿದರು.

ಶನಿವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಆವರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತವಾಗಿ ಪುರುಷರ ಸಬಲೀಕರಣ ಆಗಬೇಕು. ನಮ್ಮ ಮನೋಧರ್ಮಕ್ಕೆ, ನಂಬಿಕೆಗೆ  ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ ಇದರ ಬಗ್ಗೆ ಚಿಂತನಾ-ಮಂಥನಗಳು ನಡೆಯಬೇಕಿದೆ ಎಂದರು.

ಕಾರ್ಯಗಾರದಲ್ಲಿ ಅಭಾವಿಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ,  ರಾಜ್ಯ ಅಧ್ಯಕ್ಷರು ಡಾ.ಅಲ್ಲಮ ಪ್ರಭು, ಜಗದೀಶ ಮಾನೆ, ಶ್ರೀ ಹರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: