ಪ್ರಮುಖ ಸುದ್ದಿ

ವಿವಾದಿತ ರಾಷ್ಟ್ರೀಯ ಪೌರತ್ವ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅನುಮೋದನೆ ನೀಡಿರುವುದಕ್ಕೆ  ವಿರೋಧ : ಅಸ್ಸಾಂನಲ್ಲಿ ಬಂದ್ ಗೆ ಕರೆ

ದೇಶ( ನವದೆಹಲಿ)ಡಿ.10:-  ವಿವಾದಿತ ರಾಷ್ಟ್ರೀಯ ಪೌರತ್ವ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅನುಮೋದನೆ ನೀಡಿರುವುದಕ್ಕೆ  ವಿರೋಧ ವ್ಯಕ್ತವಾಗಿದ್ದು, ಅಸ್ಸಾಂನಲ್ಲಿ ಬಂದ್ ಗೆ ಕರೆ ನೀಡಲಾಗಿದೆ.

ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ನಂತರ ಅಸ್ಸಾಂನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅಸ್ಸಾಂನಲ್ಲಿ, ಅಸ್ಸಾಂ ವಿದ್ಯಾರ್ಥಿ ಸಂಘ (ಎಎಎಸ್‌ಯು) ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ  ಡಿಬ್ರೂಗಢ್ ದಲ್ಲಿ ಪ್ರತಿಭಟನೆ ನಡೆಸಿತು.  ಪ್ರತಿಭಟನಾ ಪ್ರದರ್ಶನದ ವೇಳೆ ವಿದ್ಯಾರ್ಥಿಗಳು ಟೈಯರ್ ಗಳನ್ನು  ಸುಟ್ಟುಹಾಕಿದರು.

ಇದಲ್ಲದೆ, ಈ ಮಸೂದೆ ಅಂಗೀಕಾರದ ವಿರುದ್ಧ ಈಶಾನ್ಯ ವಿದ್ಯಾರ್ಥಿ ಸಂಸ್ಥೆ (ನೆಸೊ) ಮತ್ತು ಆಲ್ ಅಸ್ಸಾಂ ವಿದ್ಯಾರ್ಥಿ ಸಂಘ (ಎಎಎಸ್‌ಯು) ಸಹ 12 ಗಂಟೆಗಳ ಕಾಲ ಬಂದ್ ಗೆ ಕರೆ ನೀಡಿವೆ.  ಗುವಾಹಟಿಯಲ್ಲಿ ಮಂಗಳವಾರ ಯಾವ ಅಂಗಡಿಗಳನ್ನೂ ತೆರೆಯಲಾಗಿಲ್ಲ.

ಸೋಮವಾರ ರಾತ್ರಿ 12 ಗಂಟೆಗೆ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ ಎನ್ನಲಾಗುತ್ತಿದ್ದು,    12 ಗಂಟೆಗಳ ಚರ್ಚೆಯ ನಂತರ  ಮತದಾನ ನಡೆದಿದ್ದು,  311 ಮತಗಳು ಪರವಾಗಿ ಮತ್ತು 80 ಮತಗಳು ವಿರುದ್ಧವಾಗಿ ಬಂದಿವೆ.  ಈಗ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ.(ಎಸ್.ಎಚ್)

Leave a Reply

comments

Related Articles

error: