ಮೈಸೂರು

ಒತ್ತಡ ನಿವಾರಿಸಲು ಯೋಗ ಸಹಕಾರಿ : ಹರಿದ್ವಾರಕಾನಾಥ್

ಮೈಸೂರು ಯೋಗ ಅಸೋಸಿಯೇಷನ್ ವತಿಯಿಂದ ಸೂರ್ಯೋಪಾಸನೆ ಮತ್ತು ಸಾಮೂಹಿಕ ಸೂರ್ಯನಮಸ್ಕಾರ ಆಚರಣೆಯನ್ನು ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಶ್ರೀಮನ್ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಜಿ.ಎಸ್.ಎಸ್.ಫೌಂಡೇಶನ್ ನ ಸಂಸ್ಥಾಪಕ ಹರಿದ್ವಾರಕಾನಾಥ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯೋಗ ಮನುಷ್ಯನ ಜೀವನಕ್ಕೆ ದಿವ್ಯ ಔಷಧವಾಗಿ ಕಾರ್ಯನಿರ್ವಹಿಸಲಿದೆ. ಮನುಷ್ಯ ಇಂದು ಒತ್ತಡದ ಜೀವನದಲ್ಲಿ ಬದುಕುತ್ತಿದ್ದಾನೆ. ಅವನಲ್ಲಿರುವ ಒತ್ತಡಗಳನ್ನು ನಿವಾರಿಸಿ ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಲು ಯೋಗ ಮತ್ತು ಧ್ಯಾನ ಸಹಾಯಕವಾಗಲಿವೆ. ಭಾರತದ ಯೋಗದತ್ತ ವಿದೇಶಿಯರೂ ಗಮನ ಹರಿಸಿದ್ದು, ಅವರೂ ಕೂಡ ಇಂದು ಯೋಗವನ್ನು ಕಲಿಯಲು ಹೆಚ್ಚು ಉತ್ಸುಕರಾಗಿದ್ದಾರೆ ಎಂದರು.

ಈ ಸಂದರ್ಭ ಯೋಗವನ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಕೆ.ಎಸ್.ರಘುರಾಮಯ್ಯ ವಾಜಪೇಯಿ, ಪುಷ್ಪಾ ಅಯ್ಯಂಗಾರ್, ಡಾ.ಕೆ.ಲೀಲಾಪ್ರಕಾಶ್, ಪೊಲೀಸ್ ನಾಗಭೂಷಣ್ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷ ಯೋಗ ಪ್ರಕಾಶ, ಮಹಾನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಬಿ.ವಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ನೂರಾರು ಯೋಗಪಟುಗಳು ಪಾಲ್ಗೊಂಡು ಸೂರ್ಯ ನಮಸ್ಕಾರ ನಡೆಸಿದರು.

Leave a Reply

comments

Related Articles

error: