ಪ್ರಮುಖ ಸುದ್ದಿ

ಚಾಮರಾಜ ನಗರ ಜಿಲ್ಲಾ ಪೋಲಿಸ್ ಇಲಾಖೆಯಿಂದ ಹೆಲ್ಮೆಟ್ ಧರಿಸಿ ಅಭಿಯಾನ : ಅರಿವು ಮೂಡಿಸಲು ದಂಡದ ಬದಲು ಕಡಿಮೆ ದರದಲ್ಲಿ ಹೆಲ್ಮೆಟ್ ವಿತರಣೆ

ರಾಜ್ಯ(ಚಾಮರಾಜನಗರ)ಡಿ.10:- ಚಾಮರಾಜ ನಗರ ಜಿಲ್ಲಾ ಪೋಲಿಸ್ ಇಲಾಖೆಯಿಂದ ಹೆಲ್ಮೆಟ್ ಧರಿಸಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಜನರಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಅರಿವು ಮೂಡಿಸುವ ಅಭಿಯಾನಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದ್ ಕುಮಾರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು  ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವ ನಿಟ್ಟಿನಲ್ಲಿ ಅರಿವು ಮೂಡಿಸಲು ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಸವಾರರಿಗೆ ದಂಡದ ಬದಲಾಗಿ ಕಡಿಮೆ ದರದಲ್ಲಿ ಹೆಲ್ಮೆಟ್  ನೀಡಲಾಗುವುದು ಎಂದು  ತಿಳಿಸಿದರು.

ಆದ್ದರಿಂದ ಸಾರ್ವಜನಿಕರು  ಹೆಲ್ಮೆಟ್ ಧರಿಸಿ ಪ್ರಾಣಾಪಾಯದಿಂದ ಪಾರಾಗಿ ಎಂದು ಕರೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: