ಮೈಸೂರು

ರಾಜ್ಯಮಟ್ಟದ ಯುವ ವಿಜ್ಞಾನ ಸ್ಪರ್ಧೆಗೆ ಎ.ಸಾನ್ವಿ ಆಯ್ಕೆ

ಮೈಸೂರು, ಡಿ.10:- ನಗರದ ವಿದ್ಯಾವರ್ಧಕ ಸಂಘ, ಬಿ.ಎಂ.ಶ್ರೀ. ಶೈಕ್ಷಣಿಕ ಸಂಸ್ಥೆಯ 8ನೇ ತರಗತಿ ವಿದ್ಯಾರ್ಥಿನಿ ಎ.ಸಾನ್ವಿಯವರು 27ನೇ ಮೈಸೂರು ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿ ಇದೀಗ ರಾಜ್ಯಮಟ್ಟದಲ್ಲಿ ನಡೆಯಲಿರುವ ಬೆಳ್ಳೂರಿನ ಆದಿಚುಂಚನಗಿರಿಯಲ್ಲಿ ಡಿಸೆಂಬರ್ 17ರಿಂದ 19ರವರೆಗೆ ಯುವ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.

ಸಾನ್ವಿಯವರು ಮೈಸೂರಿನ ಇನ್ಫೋಸಿಸ್‍ನ ಪ್ರಾಜೆಕ್ಟ್ ಮ್ಯಾನೇಜರ್ ಅಮರ್ ಎಸ್. ಹಾಗೂ ಸುಶೃತ ಕಣ್ಣಿನ ಆಸ್ಪತ್ರೆಯ ತಜ್ಞರಾದ ಡಾ.ಬಿ.ಗಾಯತ್ರಿಯವರ ಸುಪುತ್ರಿಯಾಗಿರುತ್ತಾರೆ. ಸಾನ್ವಿಯವರು ವಿಜ್ಞಾನ ಶಿಕ್ಷಕಿ ಅನುಪಮ ಪದಕಿಯವರ ಮಾರ್ಗದರ್ಶನದಲ್ಲಿ ವಿಜ್ಞಾನ ವಿಷಯದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: