ಕ್ರೀಡೆಮೈಸೂರು

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕ್ರಿಕೆಟ್ ಟೂರ್ನಿ : ಚಾಂಪಿಯನ್ ಆಗಿ ಹೊರಹೊಮ್ಮಿದ ದಿ.ಹಿಂದೂಸ್ಥಾನ್ ಐಟಿ ಆ್ಯಂಡ್ ಎಸ್ ವಿಶ್ವವಿದ್ಯಾಲಯ ತಂಡ

ಮೈಸೂರು,ಡಿ.11:- ಉತ್ತಮ ಪ್ರದರ್ಶನ ನೀಡಿದ ಚೆನ್ನೈನ ದಿ.ಹಿಂದೂಸ್ಥಾನ್ ಐಟಿ ಆ್ಯಂಡ್ ಎಸ್ ವಿಶ್ವವಿದ್ಯಾಲಯ ತಂಡ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ  ಆತಿಥೇಯ ಮೈಸೂರು ವಿಶ್ವವಿದ್ಯಾಲಯ ತಂಡದ ವಿರುದ್ಧ 29ರನ್ ಗಳಿಂದ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಹಿಂದೂಸ್ಥಾನ್ ತಂಡ ನಿಗದಿತ 45 ಓವರ್ ಗಳಲ್ಲಿ 7ವಿಕೆಟ್ ಗೆ 232ರನ್ ದಾಖಲಿಸಿತು. ಪ್ರತಿಯಾಗಿ ಮೈಸೂರು ತಂಡ 41.2ಓವರ್ ಗಳಲ್ಲಿ  203ರನ್ ಗಳಿಗೆ ಸರ್ವ ಪತನ ಕಂಡಿತು. ಇದಕ್ಕೂ ಮುನ್ನ  3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಹೈದ್ರಾಬಾದ್ ನ ಜೆಎನ್ ಟಿಯು ವಿವಿ ತಂಡ ಬೆಂಗಳೂರಿನ ಜೈನ್ ವಿವಿಯ ವಿರುದ್ಧ ಜಯ ಸಾಧಿಸಿತು.

ದಕ್ಷಿಣ ಭಾರತದ ಅಂತರ ವಿಶ್ವವಿದ್ಯಾಲಯ ಪುರುಷರ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದ ದಿ ಹಿಂದೂಸ್ಥಾನ್ ಐಟಿ ಆ್ಯಂಡ್ ಎಸ್ ವಿಶ್ವವಿದ್ಯಾಲಯಕ್ಕೆ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಟ್ರೋಫಿ ವಿತರಿಸಿದರು. ಈ ಸಂದರ್ಭ ಮೈಸೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕರಾದ  ಡಾ.ಪಿ ಕೃಷ್ಣಯ್ಯ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: