ಮೈಸೂರು

ಕಳುವು ಪ್ರಕರಣದಲ್ಲಿ   08 ಲ್ಯಾಪ್‍ಟಾಪ್‍  ಮತ್ತು 29 ಮೊಬೈಲ್ ಫೋನ್‍  ವಶ : ವಾರಸುದಾರರಿಗೆ ಸಿಸಿಬಿ ಘಟಕ ಸಂರ್ಕಿಸಲು ಮನವಿ   

ಮೈಸೂರು,ಡಿ.11:-   ಮೈಸೂರು ನಗರ ಸಿ.ಸಿ.ಬಿ. ಪೊಲೀಸರು ಅಶೋಕಪುರಂ ಪೊಲೀಸ್ ಠಾಣೆಯ ಮೊಕದ್ದಮೆ ಸಂಖ್ಯೆ 16/2015 ಕಳುವು ಪ್ರಕರಣಕ್ಕೆ ಸಂಬಂಧಪಟ್ಟಂತೆ    07/12/2018 ರಂದು ಆರೋಪಿ ರಂಗಸ್ವಾಮಿ ಎಂಬಾತನನ್ನು  ದಸ್ತಗಿರಿ ಮಾಡಿ ಆತನಿಂದ    ವಿವಿಧ ಕಂಪನಿಯ 8 ಲ್ಯಾಪ್‍ಟಾಪ್‍ಗಳು  ಮತ್ತು 29 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿರುತ್ತಾರೆ.

ತನಿಖಾ ಕಾಲದಲ್ಲಿ ಲ್ಯಾಪ್‍ಟಾಪ್‍ಗಳು ಮತ್ತು ಮೊಬೈಲ್ ಫೋನ್‍ಗಳ ವಾರಸುದಾರರು ಪತ್ತೆಯಾಗಿಲ್ಲ.  ಆದ್ದರಿಂದ   8 ಲ್ಯಾಪ್‍ಟಾಪ್‍ಗಳು  ಮತ್ತು 29 ಮೊಬೈಲ್ ಫೋನ್‍ಗಳ ವಾರಸುದಾರರು ಯಾರಾದರೂ ಇದ್ದಲ್ಲಿ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಅಶೋಕ ರಸ್ತೆ, ಮಿಲಾದ್ ಪಾರ್ಕ್ ಬಳಿ ಇರುವ  ಸಿ.ಸಿ.ಬಿ. ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಲು  ಕೋರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: