ಮೈಸೂರು

ಇಂದಿನಿಂದ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ : ಮಳೆ ಬರುವ ಸಾಧ್ಯತೆ ಇಲ್ಲ

ಮೈಸೂರು,ಡಿ.11:- ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ವಾರದ ಮುನ್ಸೂಚನೆಯಂತೆ, ಮೈಸೂರು ಜಿಲ್ಲೆಯಲ್ಲಿ   11-12- 2019ರಿಂದ 15-12-2019 ವರೆಗೆ ಮೋಡ ಕವಿದ ವಾತಾವರಣವಿದ್ದು, ಮಳೆ ಬರುವ ಸಾಧ್ಯತೆ ಇಲ್ಲ. ಗರಿಷ್ಠ ಉಷ್ಣಾಂಶ

28-29ಡಿಗ್ರಿ ಸೆಲ್ಶಿಯಸ್  ಮತ್ತು ಕನಿಷ್ಠ ಉಷ್ಣಾಂಶ 16-17ಡಿಗ್ರಿ ಸೆಲ್ಶಿಯಸ್ ವರೆಗೆ ದಾಖಲಾಗುವ ಸಾಧ್ಯತೆಯಿದೆ. ಬೆಳಗಿನ ಗಾಳಿಯ ತೇವಾಂಶ ಶೇಕಡ 72-75% ವರೆಗೆ ಮತ್ತು ಮಧ್ಯಾಹ್ನದ ತೇವಾಂಶ ಶೇಕಡ 50-55% ಮತ್ತು ಗಾಳಿಯು ಗಂಟೆಗೆ ಸರಾಸರಿ 2-3 ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗ  ತಿಳಿಸಿದೆ.

ಭತ್ತ, ರಾಗಿ ಮತ್ತು  ಇತರೆ ಕಟಾವು ಮತ್ತು ಒಕ್ಕಣೆ  : ಜಿಲ್ಲೆಯಲ್ಲಿ ಮೋಡ ಕವಿದ ವಾತವಾರಣವಿದ್ದು, ಮುಂದಿನ ಮೂರು ನಾಲ್ಕು ದಿನಗಳು ಮಳೆ ಬರುವ ಸಾಧ್ಯತೆ ಇಲ್ಲ. ಆದ್ದರಿಂದ ರೈತರು ಭತ್ತ, ರಾಗಿ ಹಾಗೂ ಇತರೆ ಬೆಳೆಗಳ ಕಟಾವು ಮತ್ತು ಒಕ್ಕಣೆ ಕೆಲಸ ಕಾರ್ಯಗಳನ್ನು ಮುಂದುವರೆಸಲು ತಿಳಿಸಲಾಗಿದೆ.

ಬೆಳೆಯ ಉಳಿಕೆಗಳ ನಿರ್ವಹಣೆ

ಬೆಳೆಗಳನ್ನು ಕಟಾವು ಮಾಡಿದ ನಂತರ ಬೆಳೆಯ ಉಳಿಕೆಗಳನ್ನು ಸುಡಬಾರದು. ಅವುಗಳನ್ನು ಕೂಡಿ ಹಾಕಿ ಎರೆಗೊಬ್ಬರ/ಕಾಂಪೋಕ್ಟ್  ತಯಾರಿಸಲು ಉಪಯೋಗಿಸಬೇಕು.

ಟೊಮೆಟೊ ಮತ್ತು ದೊಡ್ಡಮೆಣಸಿನಕಾಯಿ ಬೆಳೆಗೆ ಹಣ್ಣು ಕೊಳೆರೋಗ ಕಂಡುಬಂದಿದ್ದು, ಇದರ ಹತೋಟಿಗೆ ಇಂಡೊಫಿಲ್-ಎಮ್-45 ಔಷಧಿಯನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು.

ಗುಲಾಬಿ ಹೂ ಬಿಡುವ ಎಲೆ ಚುಕ್ಕೆ ರೋಗ ಕಡಿಮೆ ಉಷ್ಣಾಂಶ ಮತ್ತು ಮೋಡದ ವಾತಾವರಣ ವಿರುವುದರಿಂದ ಗುಲಾಬಿ ಹೂವಿನ ಗಿಡದಲ್ಲಿ ಎಲೆ ಚುಕ್ಕೆ ರೋಗ ಕಂಡು ಬಂದಿದೆ. ಇದರ ಹತೋಟಿಗೆ ಬೆವಿಷ್ಟಿನ್ 1 ಗ್ರಾಂ ಔಷಧಿಯನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣಮಾಡಿ ಚನ್ನಾಗಿ ನೆನೆಯುವಂತೆ ಸುರಿಯಬೇಕು/ಸಿಂಪರಣೆಮಾಡಬೇಕು.

ಜಾನುವಾರು,ರೇಷ್ಮೆ ಹಾಗೂ ಕೋಳಿ ಸಾಕಣೆ ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ವಾತಾವರಣದ ಉಷ್ಣಾಂಶದಲ್ಲಿ ಸ್ವಲ್ಪ ಇಳಿತವಿರುವುದರಿಂದ ಜಾನುವಾರು,ರೇಷ್ಮೆ ಹಾಗೂ ಕೋಳಿ ಸಾಕಣೆ ಕೊಠಡಿಯ ಉಷ್ಣಾಂಶದ ಸ್ಥಿರತೆಯನ್ನು ವಿದ್ಯುತ್ ಬಲ್ಪ್ ನ ಶಾಖದ ಸಹಾಯದಿಂದ ಕಾಪಾಡಿಕೊಳ್ಳಬೇಕು.

ಈ ಕೇಂದ್ರದಲ್ಲಿ ಎರೆಹುಳುಗಳು ಕೆ.ಜಿಗೆ 500ರೂ, ಹಾಗೂ ಉತ್ತಮ ಗುಣಮಟ್ಟದ ಚಕ್ತಮುನಿ,ಛಾಯಾ, ಹಿಪ್ಪುನೇರಳೆ (ವಿ-5), ಇನ್ಸುಲಿನ್, ಗ್ಲಿರಿಸೀಡಿಯಾ ಮತ್ತು ನುಗ್ಗೆ(ಪಿ.ಕೆ.ಎಂ-1) ಸಸಿಗಳು ಮಾರಾಟಕ್ಕೆ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ರೈತರು ದೂರವಾಣಿ ಮೂಲಕ ಡಾ. ಪಿ,ಪ್ರಕಾಶ್, ಹಿರಿಯ ಕ್ಷೇತ್ರ ಅಧೀಕ್ಷಕರು/  ಎನ್.ನರೇಂದ್ರಬಾಬು, ಸಹ ಸಂಶೋಧಕರು, ದೂರವಾಣಿ ಸಂಖ್ಯೆ. 9449869914/08212591267/9343532154 ರವರನ್ನು ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: