ದೇಶಪ್ರಮುಖ ಸುದ್ದಿ

ಜಿಎಸ್‍ಟಿ ಕರಡು ಮಸೂದೆಗೆ ಒಪ್ಪಿಗೆ

ನವದೆಹಲಿ : ಮಾರ್ಚ್ 9 ರಿಂದ ನಡೆಯುವ ಬಜೆಟ್ ಅಧಿವೇಶನದಲ್ಲಿ ಮಸೂದೆಗೆ “ಸರಕು ಮತ್ತು ಸೇವಾ ತೆರಿಗೆ – ಜಿಎಸ್‍ಟಿ”ಗೆ ಶಾಸನಾತ್ಮಕ ಒಪ್ಪಿಗೆ ಪಡೆಯುವ ವಿಶ್ವಾಸವಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಜಿಎಸ್‍ಟಿ ಮಂಡಳಿ ಸಭೆಯ ನಂತರ ಮಾತನಾಡಿದ ಅವರು, ಕೇಂದ್ರದ ಜಿಎಸ್‍ಟಿ ಮತ್ತು ಅಂತಾರಾಜ್ಯ ವಹಿವಾಟಿಗೆ ಸಂಬಂಧಿಸಿದ ಸಮಗ್ರ ಕರಡು ಮಸೂದೆಗೆ ಜಿಎಸ್‍ಟಿ ಮಂಡಳಿ ಒಪ್ಪಿಗೆ ನೀಡಿದೆ. ರಾಜ್ಯಗಳಿಗೆ ಸಂಬಂಧಿಸಿದ ಯುಟಿ-ಜಿಎಸ್‍ಟಿ ಮತ್ತು ಕೇಂದ್ರಾಡಳಿತ ಮಸೂದೆಗಳಿಗೆ ಮಾರ್ಚ್ 16 ರಂದು ನಡೆಯಲಿರುವ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದ್ದಾರೆ.

ಶೇ.20 ರಷ್ಟು ಕೇಂದ್ರ ಮತ್ತು ಶೇ.20 ರಷ್ಟು ರಾಜ್ಯಗಳು ಸೇರಿ ಗರಿಷ್ಠ ಶೇ. 40ರ ವರೆಗೂ ತೆರಿಗೆ ವಿಧಿಸಲು ಜಿಎಸ್‍ಟಿ ಮಸೂದೆಯಲ್ಲಿ ಅವಕಾಶವಿದೆ. ಆದರೆ ಈ ಹಿಂದೆ ಮಂಡಳಿಯ ಒಪ್ಪಿಗೆ ನೀಡಿರುವ ಶೇ.5, ಶೇ.12, ಶೇ.18 ಮತ್ತು ಶೇ. 28 ಹಂತಗಳಲ್ಲಿಯೇ ತೆರಿಗೆ ಏರಿಸಬೇಕಾಗುತ್ತದೆ ಎಂದು ಹಣಕಾಸು ಸಚಿವರು ತಿಳಿಸಿದರು.

Leave a Reply

comments

Related Articles

error: