
ಪ್ರಮುಖ ಸುದ್ದಿ
ಯಾವುದೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿಲ್ಲ,ಕೆಟ್ಟ ಸರ್ಕಾರವನ್ನು ಬೀಳಿಸಿದ ಸಂತಸ ಇದೆ : ಹೆಚ್.ವಿಶ್ವನಾಥ್
ರಾಜ್ಯ(ಬೆಂಗಳೂರು),ಡಿ.12:- ನಾನು ಯಾವುದೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿಲ್ಲ. ನಮಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಹೈಕಮಾಂಡ್ ಇದ್ದಂತೆ ಎಂದು ಹುಣಸೂರು ಬಿಜೆಪಿ ಪರಾಜಿತ ಅಭ್ಯರ್ಥಿ ಹೆಚ್.ವಿಶ್ವನಾಥ್ ಹೇಳಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಹೆಚ್.ವಿಶ್ವನಾಥ್, ನಾನು ಹುಣಸೂರಿನಲ್ಲಿ ಸೋತಿರಬಹುದು ಆದರೆ ನಮ್ಮ ಉದ್ದೇಶ ಈಡೇರಿದೆ. ನಾನು ಯಾವುದೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿಲ್ಲ. ಕೆಟ್ಟ ಸರ್ಕಾರವನ್ನು ಬೀಳಿಸಿದ ಸಂತಸ ಇದೆ ಎಂದು ತಿಳಿಸಿದರು.
ನಾನು ಮೂರು ಪಕ್ಷಗಳಿಗೆ ಪಕ್ಷಾಂತರ ಮಾಡಿದ್ದೀನಿ ಎನ್ನುತ್ತಾರೆ. ಅಯೋಗ್ಯ ಸರ್ಕಾರವನ್ನು ಕಿತ್ತು ಹಾಕಲು ನಾನು ಪಕ್ಷಾಂತರ ಮಾಡಿದ್ದೇನೆ. ಸಿದ್ಧರಾಮಯ್ಯ 6 ಬಾರಿ, ರಮೇಶ್ ಕುಮಾರ್ 9 ಬಾರಿ ಪಕ್ಷಾಂತರ ಮಾಡಿರಲಿಲ್ಲವೇ? ಅವರದ್ದು ಪಕ್ಷಾಂತರವಲ್ಲದೇ ಮತ್ತೇನು ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದರು. (ಕೆ.ಎಸ್,ಎಸ್.ಎಚ್)