ಮೈಸೂರು

ಮಾಜಿ ಸಚಿವ ಜಿ. ಟಿ. ದೇವೇಗೌಡ ದಂಪತಿಯನ್ನು ಸನ್ಮಾನಿಸಿ ಆಶೀರ್ವಾದ ಪಡೆದ ಶಾಸಕ ಹೆಚ್.ಪಿ ಮಂಜುನಾಥ್

ಮೈಸೂರು,ಡಿ.12:- ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ವಿರುದ್ಧ ಗೆಲುವು ಸಾಧಿಸಿ ಕಾಂಗ್ರೆಸ್ ನೂತನ ಶಾಸಕರಾಗಿ ಆಯ್ಕೆಯಾಗಿರುವ ಹೆಚ್.ಪಿ ಮಂಜುನಾಥ್ ನಿನ್ನೆ  ಮಾಜಿ ಸಚಿವ ಜಿ. ಟಿ. ದೇವೇಗೌಡ ಅವರ ಮನೆಗೆ ತೆರಳಿ ಜಿ.ಟಿ.ದೇವೇಗೌಡ ದಂಪತಿಯನ್ನು ಸನ್ಮಾನಿಸಿ ಬಳಿಕ ಆಶೀರ್ವಾದ ಪಡೆದರು.

ನಗರದ ವಿಜಯ ನಗರದಲ್ಲಿರುವ ಮಾಜಿ ಸಚಿವ ಜಿ.ಟಿ ದೇವೇಗೌಡರ ನಿವಾಸಕ್ಕೆ ನೂತನ ಶಾಸಕ ಹೆಚ್.ಪಿ ಮಂಜುನಾಥ್  ಪತ್ನಿ ಸುಪ್ರಿಯಾ ಜೊತೆ ಭೇಟಿ ನೀಡಿದರು. ನಂತರ ಉಭಯ ಕುಶಲೋಪರಿ ವಿಚಾರಿಸಿದರು. ಉಪಚುನಾವಣೆಗೆ ಮುನ್ನ ಹುಣಸೂರಿನಲ್ಲಿ ಹೆಚ್.ಪಿ ಮಂಜುನಾಥ್ ಗೆಲ್ಲುತ್ತಾರೆ ಎಂದು ಜಿ.ಟಿ ದೇವೇಗೌಡರು ಭವಿಷ್ಯ ನುಡಿದಿದ್ದರು. ಈ ನಡುವೆ ಉಪಚುನಾವಣೆ ವೇಳೆ  ಜಿ.ಟಿ ದೇವೇಗೌಡರ ಪುತ್ರ ಹರೀಶ್ ಗೌಡ ಹೆಚ್.ಪಿ  ಮಂಜುನಾಥ್ ಬೆಂಬಲಕ್ಕೆ ನಿಂತಿದ್ದರು. ಹೀಗಾಗಿ ಜಿ.ಟಿ ದೇವೇಗೌಡರನ್ನು ಭೇಟಿಯಾಗಿ ಅವರಿಗೆ ಹಾರಹಾಕಿ ಹೆಚ್.ಪಿ ಮಂಜುನಾಥ್  ಸನ್ಮಾನಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: