ಮೈಸೂರು

ಬಯಲು ಮೂತ್ರ ವಿಸರ್ಜನೆ : ವ್ಯಕ್ತಿಗೆ ಸಾವಿರ ರೂ.ದಂಡ ವಿಧಿಸಿದ ಪಾಲಿಕೆ

ಮೈಸೂರು,ಡಿ.12:- ಬಯಲು ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯೋರ್ವನಿಗೆ ಮೈಸೂರು ಮಹಾನಗರ ಪಾಲಿಕೆ ಒಂದು ಸಾವರ ರೂ.ದಂಡ ವಿಧಿಸಿರುವ ಕುರಿತು ವರದಿಯಾಗಿದೆ.

ತಿಲಕ್ ನಗರದ 16ನೇ ಕ್ರಾಸ್ ನಲ್ಲಿರುವ ನಗರ ಪಾಲಿಕೆ ವಲಯ ಕಛೇರಿ 6ರ ಹಿಂಭಾಗ ಮಂಗಳವಾರ ಚೇತನ್ ಎಂಬಾತ ಬಯಲು ಮೂತ್ರ ವಿಸರ್ಜನೆ ಮಾಡುತ್ತಿದ್ದ.  ಅದಕ್ಕೆ ಪಾಲಿಕೆಯ ಮಹಿಳಾ ಆರೋಗ್ಯಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿದಾಗ ಅವರೊಂದಿಗೂ ಅಸಭ್ಯವಾಗಿ ವರ್ತಿಸಿದ್ದ. ಬಯಲು ಮೂತ್ರ ವಿಸರ್ಜನೆ ಮಾಡಿದ ಅಪರಾಧಕ್ಕಾಗಿ ಚೇತನ್ ಗೆ ಒಂದು ಸಾವಿರ ರೂ.ದಂಡ ವಿಧಿಸಲಾಗಿದ್ದು, ಈತನ ವಿರುದ್ಧ ಕ್ರಮಕ್ಕೆ ಮಂಡಿ ಠಾಣೆಗೆ ಪತ್ರ ಬರೆಯಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಟ್ವೀಟರ್ ಖಾತೆಯಲ್ಲಿ ಬರೆಯಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: