ಲೈಫ್ & ಸ್ಟೈಲ್

ವಾರದಲ್ಲಿ 10 ರೂ. ಖರ್ಚು ಮಾಡಿ ಕೇಶಕಾಂತಿ ಹೆಚ್ಚಿಸಿಕೊಳ್ಳಬಹುದು..!

ಧೂಳು, ಮಾಲಿನ್ಯ, ಬಿಸಿಲಿನ ತಾಪದಿಂದ ಕೂದಲು ಮೃದುತನವನ್ನು ಕಳೆದುಕೊಂಡು ಬಿರುಸಾಗುತ್ತದೆ. ಇದು ಸರಿಯಾದ ಆಹಾರ ಪದ್ಧತಿ ಇಲ್ಲದೇ ಅಥವಾ ಹಾರ್ಮೋನ್ ಗಳ ಅಸಮತೋಲನದಿಂದಲೂ ಆಗುವ ಸಾಧ್ಯತೆಯಿದೆ. ಇದರಿಂದ ಕೂದಲುಗಳಲ್ಲಿನ ಹೊಳಪು ಮಾಯವಾಗುತ್ತದೆ. ಕೇವಲ 10 ರೂಪಾಯಿ ಖರ್ಚು ಮಾಡಿ ವಾರದಲ್ಲಿ ಎರಡು  ಅಥವಾ ಮೂರು ಸಲ ಮನೆಯಲ್ಲಿಯೇ ಇವುಗಳನ್ನು ಪಾಲಿಸಿದಲ್ಲಿ ನಿಮ್ಮ ಕೇಶಕಾಂತಿ ಅದ್ಭುತ ಮೃದುತನವನ್ನು ಪಡೆಯಲಿದೆ.

ಸೌತೆಕಾಯಿ : ಎರಡು ಚಮಚ ಸೌತೆಕಾಯಿಯ ರಸವನ್ನು ತಲೆಯ ಕೂದಲಿನ ಬುಡಕ್ಕೆ ಹಚ್ಚಿಕೊಂಡು ಒಂದು ಗಂಟೆಯ ನಂತರ ತೊಳೆಯಿರಿ.

ಕರಿಬೇವು : ಒಂದೊಂದು ಚಮಚ ಕರಿಬೇವು ಮತ್ತು ಮೊಸರನ್ನು ಮಿಶ್ರಣ ಮಾಡಿಕೊಂಡು ತಲೆಯ ಕೂದಲಗೆ ಹಾಗೂ ಕೂದಲಿನ ಬುಡಕ್ಕೆ ಹಚ್ಚಿಕೊಂಡು ಒಂದು ಗಂಟೆಯ ಬಳಿಕ ತೊಳೆಯಿರಿ.

ಆಲಿವ್ ಎಣ್ಣೆ : ಮೂರರಿಂದ ನಾಲ್ಕು ಚಮಚ ಆಲಿವ್ ಆಯಿಲ್ ನ್ನು  ಸ್ವಲ್ಪ ಬಿಸಿಮಾಡಿ ಬಳಿಕ ಇದರಿಂದ ಕೂದಲಿಗೆ ಮಸಾಜ್ ಮಾಡಿ. ನಂತರ ಒಂದು ಟವಲ್ ನ್ನು ಬಿಸಿ ನೀರಿನಲ್ಲಿ ಅದ್ದಿ ನೀರನ್ನು ಬಸಿದು ಸ್ವಲ್ಪ ಬಿಸಿ ಇರುವಾಗಲೆ ತಲೆಗೆ ಕಟ್ಟಿಕೊಳ್ಳಿ. ಒಂದು ಗಂಟೆಯ ನಂತರ ತೊಳೆಯಿರಿ.

ಮೊಸರು : ಒಂದು ಚಮಚ ಈರುಳ್ಳಿ ರಸದೊಂದಿಗೆ ಒಂದು ಚಮಚ ಗಟ್ಟಿ ಮೊಸರು ಮತ್ತು ಒಂದು ಚಮಚ ಲಿಂಬುರಸವನ್ನು ಮಿಶ್ರಣ ಮಾಡಿ ಕೂದಲಿಗೆ ಮಸಾಜ್ ಮಾಡಿಕೊಂಡು ಅರ್ಧಗಂಟೆಯ ಬಳಿಕ ಸ್ನಾನ ಮಾಡಿ.

ಜೇನುತುಪ್ಪ : ಎರಡು ಚಮಚ ಜೇನುತುಪ್ಪ ಎರಡು ಚಮಚ ಹಾಲು ಮಿಶ್ರಣ ಮಾಡಿ ಅದನ್ನು 5ರಿಂದ 6ನಿಮಿಷಗಳ ಕಾಲ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಒಂದುಗಂಟೆಯ ಬಳಿಕ ತೊಳೆಯಿರಿ.

ಮೊಟ್ಟೆ : ಎರಡು ಚಮಚ ಈರುಳ್ಳಿ ರಸದಲ್ಲಿ ಮೊಟ್ಟೆಯ ಬಿಳಿಯಭಾಗವನ್ನು ಮಿಶ್ರಣಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಒಂದು ಗಂಟೆಯ ಬಳಿಕ ತೊಳೆಯಿರಿ.

ಮೆಂತೆ : ಎರಡು ಚಮಚ ಮೆಂತೆಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಇದನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿಕೊಳ್ಳಿ. ಒಂದು ಗಂಟೆಯ ಬಳಿಕ ತೊಳೆಯಿರಿ.

ಕ್ಯಾರೆಟ್ :  ಪ್ರತಿದಿನ ಎರಡು ಚಮಚ ಕ್ಯಾರೆಟ್ ರಸವನ್ನು ಕೂದಲಿಗೆ ಹಚ್ಚಿ ಬಳಿಕ ಒಂದು ಗಂಟೆಯ ನಂತರ ತೊಳೆಯಿರಿ.

ಅಲೊವೆರಾ : ಪ್ರತಿದಿನ ಅಲೊವೆರಾ ಜೆಲ್ ನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ ಒಂದು ಗಂಟೆಯ ಬಳಿಕ ತೊಳೆಯಿರಿ.

ಈ ರೀತಿ ಮಾಡುವುದರಿಂದ ನಿಮ್ಮ ಕೂದಲು ಆರೋಗ್ಯಯುತವಾಗಿ ಕಾಂತಿಯುಕ್ತವಾಗಿರಲಿದೆ.

Leave a Reply

comments

Related Articles

error: