ಕರ್ನಾಟಕಪ್ರಮುಖ ಸುದ್ದಿ

ಮನ್‍ ಕಿ ಬಾತ್ ಬಿಟ್ಟು ಕಾಮ್‍ ಕಿ ಬಾತ್ ಶುರು ಮಾಡಿ: ಖರ್ಗೆ

ಕಲಬುರಗಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭ್ರಮೆಯಲ್ಲಿದ್ದಾರೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್‍ ನಾಯಕ ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಮೋದಿಯವರು ಪ್ರಧಾನಿ ಹುದ್ದೆಯ ಘನತೆ ಮರೆತು ಗಲ್ಲಿಗಲ್ಲಿಗಳಲ್ಲಿ ಪ್ರಚಾರಕ್ಕಿಳಿದಿದ್ದಾರೆ. ಜನ ಮೋದಿಯವರ ಹೆಸರು ಹೇಳಿ ಓಟು ಕೊಡುವುದಿಲ್ಲ. ಅವರು ಮಾಡುವ ಕಾರ್ಯಗಳನ್ನು ನೋಡಿ ಓಟು ನೀಡುವರು. ಪ್ರಧಾನಿ ಹುದ್ದೆಯಂತ ಮಹತ್ವದ ಸ್ಥಾನದಲ್ಲಿರುವವರು ಈ ರೀತಿಯ ಭ್ರಮೆಯಲ್ಲಿ ಮುಳುಗಬಾರದು ಎಂದು ಮೋದಿಯವರ ಚುನಾವಣಾ ಭಾಷಣಗಳನ್ನು ಟೀಕಿಸಿದರು.

ಮೋದಿಯವರು ಕೊಟ್ಟ ಭರವಸೆಗಳನ್ನು ಈಡೇರಿಸುವ ಮೂಲಕ ಮುಂದಿನ ಪೀಳಿಗೆಗೂ ಮಾದರಿಯಾಗಬೇಕು. ಬರೇ ಮನ್ ಕಿ ಬಾತ್ ಬಿಟ್ಟು ಕಾಮ್‍ ಕಿ ಬಾತ್ ಆರಂಭಿಸಬೇಕು ಎಂದು ತಮ್ಮದೇ ಶೈಲಿಯಲ್ಲಿ ಟೀಕಿಸಿದರು.

Leave a Reply

comments

Related Articles

error: