ಮೈಸೂರು

ಸಂಬಂಧಿಕರಿಗೆ ಅಪಘಾತ ಮಾಡಿದ ಯುವಕರಿಬ್ಬರ ಮೇಲೆ ಪ್ರತೀಕಾರಕ್ಕೆ ಯತ್ನ : ಮಾಜಿ ಸಚಿವ ಸಾ.ರಾ. ಮಹೇಶ್ ಸೋದರನಿಂದ ಪುಂಡಾಟಿಕೆ

ಮೈಸೂರು, ಡಿ.13:- ಮಾಜಿ ಸಚಿವ ಸಾ.ರಾ. ಮಹೇಶ್ ಸೋದರನಿಂದ ಪುಂಡಾಟಿಕೆ ನಡೆಸಿದ ಘಟನೆ ಮಾಜಿ ಸಚಿವ ಸಾ.ರಾ.‌ ಮಹೇಶ್ ಸ್ವಗ್ರಾಮ ಸಾಲಿಗ್ರಾಮದಲ್ಲಿ ನಡೆದಿದೆ.

ಸಂಬಂಧಿಕರೋರ್ವರನ್ನು ಯುವಕರಿಬ್ಬರು ಬೈಕ್‌ ನಲ್ಲಿ‌ ಡಿಕ್ಕಿ‌ ಮಾಡಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮಾಜಿ ಸಚಿವರ ಸೋದರನಿಂದಲೇ ದಾಂದಲೆ ನಡೆದಿದೆ. ಅಪಘಾತ ವಿಚಾರದಲ್ಲಿ ರಾಜಿ ನಡೆದ ಮೇಲೂ ಮಾಜಿ ಸಚಿವರ ಸೋದರ ಸಾ.ರಾ‌. ರಘು ಎಂಬವರು ಪುಂಡಾಟ ನಡೆಸಿದ್ದಾರೆನ್ನಲಾಗಿದೆ. ಅಪಘಾತ ಮಾಡಿದ ಯುವಕರಿದ್ದ ಬಡಾವಣೆ‌ ನುಗ್ಗಿ ದಾಂಧಲೆ ನಡೆಸಿರುವ ಸಾ.ರಾ.ರಘು. ಸ್ಥಳೀಯ ಯುವಕರ ಗುಂಪಿನೊಂದಿಗೆ ಆಗಮಿಸಿ‌ ಮನೆಗಳ‌ ಮೇಲೆ‌ ಕಲ್ಲು ತೂರಾಟ ನಡೆಸಿದ್ದಾರೆ. ಕೈಯ್ಯಲ್ಲಿ ದೊಣ್ಣೆಗಳನ್ನು ಹಿಡಿದು ಸಿಕ್ಕ‌ಸಿಕ್ಕವರ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆ ಎನ್ನಲಾಗಿದ್ದು, ಪೊಲೀಸರ‌ ಕಣ್ಣೆದುರಲ್ಲೇ    ಘಟನೆ ನಡೆದಿದೆ. ಸಾ.ರಾ.ಮಹೇಶ್ ಪ್ರತಿನಿಧಿಸುವ  ಕೆ.ಆರ್. ನಗರ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸಾಲಿಗ್ರಾಮದಲ್ಲಿ ಘಟನೆ ನಡೆದಿದ್ದು, ಸಾ.ರಾ. ರಘು ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: