ಮನರಂಜನೆ

ಸ್ವಲ್ಪ ಮಟ್ಟಿಗೆ ಬೋರ್ ಹೊಡೆಸುವ ಈ ಮಳೆ

ಯೋಗರಾಜ ಭಟ್ಟರ ಮುಂಗಾರು ಮಳೆ ಸಿನಿಮಾ ಬಿಡುಗಡೆಯಾದಾಗ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದ ಎಲ್ಲರಿಗೂ ಜಾಕ್ಪಾಟ್ ಹೊಡೆದಂತೆ ಆಗಿತ್ತು. ಅದು ಬಿಡುಗಡೆಯಾಗಿ ಎರಡೇ ವಾರಕ್ಕೆ ಕನ್ನಡದ ಚಿತ್ರರಂಗದಲ್ಲಿ ಸಾಕಷ್ಟು ಕ್ರಾಂತಿಕಾರಿ ಬೆಳವಣಿಗೆಗಗಳು ನಡೆದಿದ್ದವು. ಖಾಸಗಿ ವಾಹಿನಿಯಲ್ಲಿ ಆ್ಯಂಕರ್ ಆಗಿದ್ದ ಸಾಮಾನ್ಯ ಹುಡುಗನೊಬ್ಬ ದಿನ ಬೆಳಗಾಗುವುದರೊಳಗೆ ದೊಡ್ಡ ಸ್ಟಾರ್ ಆಗಿದ್ದ. ಅದಾಗಿ ಹತ್ತು ವರ್ಷಗಳ ನಂತರ ತಯಾರಾಗಿರುವ ಮುಂಗಾರು ಮಳೆ-2 ಸಿನಿಮಾ ಬಿಡುಗಡೆಯಾಗಿದೆ. ಮೊದಲ ಮಳೆಗೆ ಹೋಲಿಸಿದರೆ ಎರಡನೆ ಮಳೆಯ ರಭಸ ಸ್ವಲ್ಪ ಕಡಿಮೆ ಇದೆ.

ಯೋಗರಾಜ್ ಭಟ್ಟರ ಮಳೆಯಲ್ಲಿ ಪ್ರೀತಮ್ ಗಾಢ ಪ್ರೇಮವಿತ್ತು. ಅಲ್ಲದೆ ದೇವದಾಸ್ ಇದ್ದ, ಚಿತ್ರರಂಗದ ಅದ್ಭುತ ಪ್ರತಿಭೆ ಅನಂತ್ನಾಗ್ ಇದ್ದರು. ಈಗಿನ ಮಳೆಯಲ್ಲಿ ಇದಾವುದು ಇಲ್ಲ. ನಾಯಕ ನಟ ಗಣೇಶ್, ನಿರ್ಮಾಪಕ ಗಂಗಾಧರ್ ಬಿಟ್ಟರೆ ಉಳಿದೆಲ್ಲವೂ ಇಲ್ಲಿ ಹೊಸತು.

ಸಾಮಾನ್ಯ ಪ್ರೇಮಕಥೆಗಳನ್ನು ಅದ್ಭುತ ಚಿತ್ರಕಥೆಯನ್ನಾಗಿಸುವ ಕಲೆ ನಿರ್ದೇಶಕ ಶಶಾಂಕ್ಗೆ ಚೆನ್ನಾಗಿ ಗೊತ್ತು. ಆದರೆ ಬಾರಿ ಮುಂಗಾರುಮಳೆ-2 ಸಿನಿಮಾದಲ್ಲಿ ಉತ್ತಮ ಚಿತ್ರಕಥೆ ಮಾಡಿಕೊಂಡರು. ಕಥೆ ಮಾಡಿಕೊಳ್ಳುವಲ್ಲಿ ಎಲ್ಲೋ ಎಡವಿದ್ದಾರೆ ಎಂದು ಗೋಚರಿಸುತ್ತಿದೆ
ಸಿನಿಮಾದ ಮೊದಲರ್ಧ ಪಾತ್ರಗಳ ಪರಿಚಯ ಮತ್ತು ಅವುಗಳ ಹಿನ್ನೆಲೆಯನ್ನು ಹೇಳುತ್ತಲೇ, ರಾಜಸ್ತಾನವನ್ನು ಸುತ್ತುತ್ತವೆ. ವಿರಾಮದ ನಂತರ ಕತೆ ಒಪನ್ ಆಗುತ್ತದೆ. ದಿನವೊಂದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುವ ಪ್ರೀತಂ(ಗಣೇಶ್)ಗೆ ಎಕ್ಸೈಟ್ಮೆಂಟ್ ಬೇಕು. ಅದಕ್ಕಾಗಿ ಹುಡುಗಿಯರನ್ನು ಬಿಡುತ್ತಾನೆ. ಎಕ್ಸೈಟ್ಮೆಂಟ್ ಹುಡುಕಿಕೊಂಡು ಹೋಗುವ ಮಾರ್ಗದಲ್ಲಿ ನಂದಿನಿ(ನೇಹಾ ಶೆಟ್ಟಿ) ಸಿಗುತ್ತಾಳೆ. ಇವನ ಬಗ್ಗೆ ಎಲ್ಲವನ್ನು ತಿಳಿದುಕೊಳ್ಳುವಷ್ಟರೊಳಗೆ ಇಬ್ಬರ ನಡುವೆ ಲವ್ ಆಗುತ್ತದೆ. ಆಗ ಇದ್ದಕ್ಕಿದ್ದಂತೆ ನಂದಿನಿ ಜಾಗ ಖಾಲಿ ಮಾಡಿರುತ್ತಾಳೆ. ನಂದಿನಿಯೊಂದಿಗೆ ಲವ್ ಆಗಿದೆ ಎಂದು ಪ್ರೀತಂಗೆ ಅವನ ತಂದೆ ಹೇಳಿದಾಗ ಅವಳನ್ನು ಹುಡುಕಿಕೊಂಡು ಹೊಗುತ್ತಾನೆ. ನಂದಿನಿಯ ಮನೆಗೆ ಬಂದರೆ ಅಲ್ಲಿ ನಂದಿನಿಗೆ ಮದುವೆ ಫಿಕ್ಸ್ ಆಗಿರುತ್ತದೆ. ನಂದಿನಿಯನ್ನು ಪಡೆಯುತ್ತಾನಾ ಇಲ್ಲವಾ ಎನ್ನುವುದೇ ಮುಂದಿನ ಕಥೆ

ಪ್ರೀತಮ್ನಾಗಿ ಗಣೇಶ್ ಎಂದಿನಂತೆ ಸಮರ್ಥ ಅಭಿನಯ, ನಾಯಕನ ತಂದೆಯಾಗಿ ರವಿಚಂದ್ರನ್ ಅವರದ್ದು ಪಕ್ಕಾ ತಂದೆಯ ಅಭಿನಯ. ಇಂತಹ ಒಬ್ಬ ತಂದೆ ಎಲ್ಲರಿಗೂ ಬೇಕು ಎನ್ನಿಸುವಷ್ಟು ಅವರು ಅಪ್ತರಾಗುತ್ತಾರೆ. ಪ್ರತಿ ಸಿನಿಮಾದಲ್ಲೂ ಅಬ್ಬರಿಸುವ ರವಿಶಂಕರ್ ಇಲ್ಲಿ ಸೈಲೆಂಟ್ ಆಗಿ ಕಣ್ಣಲ್ಲೇ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಸಿನಿಮಾದ ಅಚ್ಚರಿ  ನಾಯಕಿ ನೇಹಾ ಶೆಟ್ಟಿ. ಭವಿಷ್ಯದಲ್ಲಿ  ಕನ್ನಡದ ಭರವಸೆಯ ನಟಿಯಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ಆಕೆಗಿದೆ. ಹಾಡುಗಳು ಇಂಪಾಗಿವೆ ಇಡಿ ಸಿನಿಮಾದ ಹೈಲೆಟ್ ಛಾಯಾಗ್ರಾಹಕ ಶೇಖರ್ಚಂದ್ರ. ಒಟ್ಟಿನಲ್ಲಿ ಒಮ್ಮೆ ಮುಂಗಾರುಮಳೆಯನ್ನು ನೋಡಲು ಅಡ್ಡಿಯಿಲ್ಲ.

Leave a Reply

comments

Related Articles

error: