ಮೈಸೂರು

ಡಾ.ಕೆ.ವಿ.ರಾಘವೇಂದ್ರರಾವ್ ಸಂಸ್ಮರಣಾ ಪ್ರಶಸ್ತಿ ಪ್ರದಾನ

ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪವಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಎಫ್ ಪಿಎ ಇಂಡಿಯಾ ಮೈಸೂರು ಶಾಕೆಯ ವತಿಯಿಂದ ಡಾ.ಕೆ.ವಿ.ರಾಘವೇಂದ್ರರಾವ್ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಡಾ.ಜಯಲಕ್ಷ್ಮಿಪುರಂ ಸೀತಾಪುರ ಮಾತನಾಡಿ ಸಾಧಕರನ್ನು ಹುಡುಕಿ ಗೌರವಿಸುವುದು ಶ್ಲಾಘನೀಯ. ಡಾ.ಎಸ್.ಸುಬ್ರಹ್ಮಣ್ಯ ಅವರಿಗೆ ನಿಜಕ್ಕೂ ಗೌರವ ಸಂದಿರುವುದು ಸಂತಸ ತಂದಿದೆ ಎಂದರು.

ಡಾ. ಕೆ.ವಿ. ರಾಘವೇಂದ್ರ ರಾವ್ ಸಂಸ್ಮರಣಾ ಪ್ರಶಸ್ತಿಯನ್ನು ಡಾ. ಎಸ್. ಸುಬ್ರಹ್ಮಣ್ಯ ಅವರಿಗೆ ನೀಡಿ ಗೌರವಿಸಲಾಯಿತು. ಸಂದರ್ಭದಲ್ಲಿ ಎಫ್ ಪಿ ಇಂಡಿಯಾ ಮೈಸೂರಿನ ಗೌಕೋಶಾಧ್ಯಕ್ಷ ಹೇರಂಬ ಆರ್ ಭಟ್, ಅಧ್ಯಕ್ಷೆ ಜಯಂತಿ ಎಂ.ಅರಸ್,ಸ್ವಯಂ ಸೇವಕ ಡಾ. ಕೆ.ಆರ್ ಸುಶೀಲ್ ರಾಘವೇಂದ್ರ, ಉಪಾಧ್ಯಕ್ಷ ಪ್ರೊ ಸತ್ಯನಾರಾಯಣ, ಉಪಾಧ್ಯಕ್ಷೆ ಜಯಶ್ರೀ ಜಿ. ರಾವ್, ಗೌಕಾರ್ಯದರ್ಶಿ ಡಿ.ಎಸ್ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: