ಪ್ರಮುಖ ಸುದ್ದಿ

ಅವರೂ ರಾಜಕಾರಣ ಮಾಡಲಿ ನಾವೂ ರಾಜಕಾರಣ ಮಾಡುತ್ತೇವೆ : ಮಾಜಿ ಸಚಿವ ಡಿ.ಕೆ ಶಿವಕುಮಾರ್ ಟಾಂಗ್

ದೇಶ(ನವದೆಹಲಿ)ಡಿ.13:- ರಾಮನಗರಕ್ಕೆ ನೀಡಿದ ಯೋಜನೆಗಳನ್ನು ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿದಂತೆ ಬಿಜೆಪಿ ಸರ್ಕಾರಕ್ಕೆ ಟಾಂಗ್ ನೀಡಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಅವರೂ ರಾಜಕಾರಣ ಮಾಡಲಿ ನಾವೂ ರಾಜಕಾರಣ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ರಾಮನಗರದ ಯೋಜನೆಗಳನ್ನು ವಾಪಸ್ ಪಡೆದ ವಿಚಾರ ಕುರಿತು ನವದೆಹಲಿಯಲ್ಲಿ ಇಂದು ಮಾತನಾಡಿದ  ಮಾಜಿ ಸಚಿವ ಡಿ.ಕೆ ಶಿವಕುಮಾರ್, ನಾವು ರಾಜಕಾರಣಿಗಳು. ಎಲ್ಲಿ ಹೋಗುತ್ತೆ.  ರಾಜಕಾರಣ ಮಾಡೋಕೆ ನಾನು ಬೆಂಗಳೂರಿನಿಂದ ಬಂದಿದ್ದೇನೆ. ನಾವು ರಾಜಕಾರಣ ಮಾಡುತ್ತೇವೆ. ಅವರೂ ರಾಜಕಾರಣ ಮಾಡಲಿ ಎಂದು ಚಾಟಿ ಬೀಸಿದರು.

ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ.  ನಮ್ಮ ಪಕ್ಷದಲ್ಲಿ ಯಾವುದೇ ಶೀತಲ ಸಮರ ಇಲ್ಲ. ಪಕ್ಷದಲ್ಲಿ ಎಲ್ಲರೂ ಶ್ರಮಿಸಿದ್ದಾರೆ. ಆದರೆ ಶ್ರಮಕ್ಕೆ ತಕ್ಕ ಫಲ ಸಿಗಲಿಲ್ಲ ಎಂಬ ನೋವಿದೆ. ನಾನು ದೆಹಲಿಯಲ್ಲಿ ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: