ಮೈಸೂರು

ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಚ್ಛ ಭಾರತ-ಸ್ವಚ್ಛ ಕರ್ನಾಟಕ ಅಭಿಯಾನ

ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ಬಿಜೆಪಿ ಯುವಮೋರ್ಚಾದ ನರಸಿಂಹರಾಜ ಕ್ಷೇತ್ರದಲ್ಲಿ ಭಾನುವಾರ  ವಾರ್ಡ್ 44ರ ಬನ್ನಿಮಂಟಪದ ಹನುಮಂತನಗರದ ಹನುಮಂತನ ದೇವಸ್ಥಾನದ ಆವರಣದಲ್ಲಿ “ಸ್ವಚ್ಛ ಭಾರತ-ಸ್ವಚ್ಛ ಕರ್ನಾಟಕ” ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ದೇವಾಲಯದ ಆವರಣದಲ್ಲಿ ಉದುರಿದ್ದ ತರಗೆಲೆಗಳನ್ನು ಗುಡಿಸಿ ಪಾಲಿಕೆ ಸಹಯೋಗದಿಂದ ಸ್ಥಳಾಂತರಿಸಲಾಯಿತು.  ಸ್ವಚ್ಛ ಭಾರತ ಅಭಿಯಾನದ ನಗರ ಸಂಚಾಲಕ ರಾಕೇಶ್ ಭಟ್ ಮಾತನಾಡಿ ಬೇಸಿಗೆಯಲ್ಲಿ ಉದುರುವ ಒಣಗಿದ ಎಲೆಗಳಿಗೆ ಸಾರ್ವಜನಿಕರು ಬೆಂಕಿ ಹಚ್ಚುತ್ತಿದ್ದಾರೆ, ಇದರಿಂದ ಪರಿಸರ ಮಾಲಿನ್ಯದ ಜೊತೆಗೆ ಅಗ್ನಿ ಅವಗಡ ಸಂಭವಿಸುವ ಸಾಧ್ಯತೆ ಇರುವುದರಿಂದ ಜನ ಸಂಘಟಿತರಾಗಿ ತ್ಯಾಜ್ಯವನ್ನು ಒಂದೆಡೆ ಸೇರಿಸಿ ಗೊಬ್ಬರ ಮಾಡಬೇಕು ಇಲ್ಲವೇ ಪಾಲಿಕೆ ಸಿಬ್ಬಂದಿಯೊಂದಿಗೆ ತೆರವುಗೊಳಿಸಲು ಪ್ರಯತ್ನಿಸಬೇಕು. ಇದಕ್ಕೆ ಸ್ವಚ್ಛತಾ ಮೊಬೈಲ್ ಆ್ಯಪ್ ಬಳಸಿಕೊಳ್ಳಬೇಕೆಂದು ತಿಳಿಸಿದರು. ಇದೇವೇಳೆ ಅಭಿಯಾನದಲ್ಲಿ ಉಪ-ಮಹಾಪೌರ ರತ್ನಾ ಲಕ್ಷ್ಮಣ್, ಯುವ ಮೋರ್ಚಾ ನಗರಾಧ್ಯಕ್ಷ ಗೋಕುಲ್ ಗೋವರ್ಧನ್, ಪ್ರಧಾನ ಕಾರ್ಯದರ್ಶಿ ಸಂಪತ್, ನರಸಿಂಹರಾಜ ಮಂಡಲ ಅಧ್ಯಕ್ಷ ನಾರಾಯಣ, ಪ್ರಧಾನ ಕಾರ್ಯದರ್ಶಿ ಲೋಹಿತ್, ಸ್ವಚ್ಛ ಭಾರತ ಅಭಿಯಾನದ ಮಂಡಲ ಸಂಚಾಲಕ ಮಂಜುನಾಥ್, ಸಹ-ಸಂಚಾಲಕ ನಾಗೇಶ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಡಾ.ಅನಿಲ್ ಥಾಮಸ್, ಬಿಜೆಪಿ ರಾಜ್ಯ ಪದಾಧಿಕಾರಿ ಪರಶಿವಮೂರ್ತಿ,ಆನಂದ್, ನಗರ ಪದಾಧಿಕಾರಿ ಕೆ.ಜೆ.ರಮೇಶ್, , ಸ್ಥಳಿಯ ಮುಖಂಡರಾದ ಶೈಲಜಾ, ವನಜಾ ಹಾಗೂ ದೇವಸ್ಥಾನದ ಭಕ್ತಾದಿಗಳು ಪಾಲ್ಗೊಂಡಿದ್ದರು.

Leave a Reply

comments

Related Articles

error: