ಮೈಸೂರು

  ಮೂವರು ಸುಲಿಗೆಕೋರರ ಬಂಧನ :  1,80,000ರೂ. ಬೆಲೆ ಬಾಳುವ 03 ಬೈಕ್‍  ಮತ್ತು 01 ಬೆಳ್ಳಿ ಚೈನ್ ವಶ

ಮೈಸೂರು,ಡಿ.14:- 04/12/2019 ರಂದು ಮಂಜುನಾಥ ಎಂಬವವರು ಬೆಂಗಳೂರಿನಿಂದ ಮೈಸೂರು ರೈಲ್ವೆ ನಿಲ್ದಾಣಕ್ಕೆ ಬಂದು ಹೊಳೆನರಸೀಪುರಕ್ಕೆ ಹೋಗುವ ರೈಲು ತಡವಾಗುತ್ತಿದ್ದರಿಂದ ಊಟ ಮಾಡುವ ಸಲುವಾಗಿ ದಾಸಪ್ಪ ಸರ್ಕಲ್‍ಗೆ ಬಂದಾಗ, ಪೆಟ್ರೋಲ್ ಬಂಕ್ ಬಳಿ ಇಬ್ಬರು ಅಪರಿಚಿತರು ಮಂಜುನಾಥ ಅವರನ್ನು ತಮ್ಮ ಊರಿನವರಂತೆ ಮಾತನಾಡಿಸಿ ತಾವು ಕೂಡ ಹೊಳೆನರಸೀಪುರದವರು ಎಂದು ಪರಿಚಯ ಮಾಡಿಕೊಂಡು ಮೂತ್ರ ವಿಸರ್ಜನೆ ಮಾಡಿ ಬರುವ ಎಂದು ಹೇಳಿ ದಾಸಪ್ಪ ಸರ್ಕಲ್‍ನ ರೈಲ್ವೆ ಬ್ರೀಡ್ಜ್ ಬಳಿ ಇರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ, ಮಂಜುನಾಥ್ ಅವರ ಕುತ್ತಿಗೆಯನ್ನು ಅದುಮಿ ಹಿಡಿದುಕೊಂಡು ಮುಖಕ್ಕೆ ಹಲ್ಲೆ ಮಾಡಿ, ಚಾಕು ತೋರಿಸಿ ಹೆದರಿಸಿ, ಜೇಬಿನಲ್ಲಿದ್ದ  2400ರೂ. ಹಣ ಮತ್ತು ಕತ್ತಿನಲ್ಲಿದ್ದ ಒಂದು ಬೆಳ್ಳಿ ಚೈನ್‍ ಕಿತ್ತುಕೊಂಡು ಹೋಗಿದ್ದರು.  ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆ ಕೈಗೊಂಡ ದೇವರಾಜ ಪೊಲೀಸರು ಕೃತ್ಯ ನಡೆದಿರುವ ಸ್ಥಳದ ಅಕ್ಕಪಕ್ಕದಲ್ಲಿರುವ ಸಿಸಿಟಿವಿ ಕ್ಯಾಮರಗಳನ್ನು ಪರಿಶೀಲಿಸಲಾಗಿ ಇಬ್ಬರು ವ್ಯಕ್ತಿಗಳು ಸಿ.ಸಿ.ಟಿ.ವಿ. ಕ್ಯಾಮರಾದಲ್ಲಿ ಕಂಡು ಬಂದಿದ್ದು, ಇದರಲ್ಲಿ ಓರ್ವ ಹಳೆಯ ಎಂಓ ಆಸಾಮಿಯಾಗಿದ್ದ. ಕಾರಣ ಆತನ ಗುರುತು ಪತ್ತೆ ಮಾಡಿ   11/12/2019 ರಂದು ಹಿನಕಲ್ ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ, ಹೊಂಡಾ ಆಕ್ಟಿವಾ ಸಮೇತ  ಕಾರ್ತಿಕ್ @ ಕರಿಯಾ ಬಿನ್ ಲೇಟ್ ಸುರೇಶ್ (23), ವಿಜಯನಗರ 2ನೇ ಹಂತ, ಮೈಸೂರು ನಗರ ಎಂಬಾತನನ್ನು ದಸ್ತಗಿರಿ ಮಾಡಿ, ವಿಚಾರಣೆ ಮಾಡಲಾಗಿ, ಈತ  ಇನ್ನಿಬ್ಬರೊಂದಿಗೆ ಸೇರಿ   ಸುಲಿಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಜರ್‍ಬಾದ್ ಠಾಣೆ, ನರಸಿಂಹರಾಜ ಠಾಣೆ ಮತ್ತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡ ಮೇರೆಗೆ ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತಿತರ ಆರೋಪಿಗಳಾದ  ಆನಂದ @ ನೇಪಾಳಿ ಬಿನ್ ಜೋಗೇಂದ್ರ ಸಿಂಗ್, (22), ಪಡುವಾರಹಳ್ಳಿ, ಶಿವಕುಮಾರ್ @ ಶಿವಪ್ರಸಾದ್ ಬಿನ್ ನಾಗರಾಜು, (19), ಅಮೃತೇಶ್ವರನಗರ, ಬೆಳವಾಡಿ ಎಂಬವರುಗಳನ್ನು   11/12/19 ರಂದು ಈ ವ್ಯಕ್ತಿಗಳ ಮನೆಯ ಬಳಿ ದಸ್ತಗಿರಿ ಮಾಡಿ, ಕೂಲಂಕುಷವಾಗಿ ವಿಚಾರಣೆ ನಡೆಸಿ, ಸುಲಿಗೆ ಮತ್ತು ಕಳುವು ಪ್ರಕರಣಗಳಿಗೆ ಸಂಬಂಧಪಟ್ಟಂತೆ, 1,80,000ರೂ. ಮೌಲ್ಯದ 01 ಬೆಳ್ಳಿ ಚೈನು ಮತ್ತು 03 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.

ಈ ಪತ್ತೆ ಕಾರ್ಯದಿಂದ ಮೈಸೂರು ನಗರದ ದೇವರಾಜ ಪೊಲೀಸ್ ಠಾಣೆಯ 01, ನಜರ್‍ಬಾದ್ ಪೊಲೀಸ್ ಠಾಣೆಯ-1, ನರಸಿಂಹರಾಜ ಪೊಲೀಸ್ ಠಾಣೆಯ-1 ಮತ್ತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ -1 ಪ್ರಕರಣಗಳು ಪತ್ತೆಯಾಗಿವೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. (ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ)  ಬಿ.ಟಿ.ಕವಿತ ಅವರ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ.  ಎಂ.ಎನ್ ಶಶಿಧರ್‍  ನೇತೃತ್ವದಲ್ಲಿ ದೇವರಾಜ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರಸನ್ನಕುಮಾರ್, ಪಿ.ಎಸ್.ಐ ಎಂ.ಆರ್ ಲೀಲಾವತಿ, ಎಸ್ ರಾಜು, ಮತ್ತು ಎಎಸ್‍ಐ ಉದಯಕುಮಾರ್, ಸಿಬ್ಬಂದಿಯವರಾದ ಸೋಮಶೆಟ್ಟಿ, ವೇಣುಗೋಪಾಲ, ಸುರೇಶ್, ನಂದೀಶ್, ಪ್ರದೀಪ್, ಮಾರುತಿ ಪವನ್‍ ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: