ಕರ್ನಾಟಕಪ್ರಮುಖ ಸುದ್ದಿಮನರಂಜನೆ

ನಟ ಪುನೀತ್ ರಾಜ್ ಕುಮಾರ್ ಬಿಎಂಟಿಸಿ ರಾಯಭಾರಿ

ಬೆಂಗಳೂರು,ಡಿ.14- ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ರಾಯಭಾರಿಯಾಗಿದ್ದಾರೆ.

ಬೆಂಗಳೂರು ಮಹಾನಗರದ ರಸ್ತೆಗಳ ಟ್ರಾಫಿಕ್ ಜಾಮ್, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಖಾಸಗಿ ವಾಹನಗಳ ಬಳಕೆಯಿಂದ ಸಾರ್ವಜನಿಕರು ಸಂಚರಿಸಲು ಬಹಳ ಕಷ್ಟಪಡುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಸಾಧ್ಯವಾದಷ್ಟು ಬಳಸಿ ಜನರು ಸಹಕರಿಸುವಂತೆ ಸರ್ಕಾರ, ಮಹಾನಗರ ಸಾರಿಗೆ ನಿಗಮ ಮನವಿ ಮಾಡಿಕೊಳ್ಳುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ ಜನರನ್ನು ಪ್ರೇರೇಪಿಸಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಎಂಟಿಸಿ ರಾಯಭಾರಿಯಾಗಿದ್ದಾರೆ.

ಈ ವಿಷಯವನ್ನು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪುನೀತ್ ರನ್ನು ನಂದೀಶ್ ರೆಡ್ಡಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ಬಿಎಂಟಿಸಿ ಭದ್ರತೆ ಮತ್ತು ಜಾಗೃತಿ ನಿರ್ದೇಶಕ ಅನುಪಮ ಅಗರ್ ವಾಲ್ ಭೇಟಿ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಈ ಹಿಂದೆ ಸರ್ಕಾರದ ಹಲವು ಸಂಸ್ಥೆಗಳಿಗೆ, ಕರ್ನಾಟಕ ಸರ್ಕಾರದ ಹಲವು ಯೋಜನೆಗಳಿಗೆ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಈಗ ಬಿಎಂಟಿಸಿಯ ರಾಯಭಾರಿಯಾಗಿದ್ದಾರೆ. ವರನಟ ಡಾ.ರಾಜ್ ಕುಮಾರ್ ನಂದಿನಿ ಹಾಲಿಗೆ ಯಾವುದೇ ಹಣ ಪಡೆಯದೆ ರಾಯಬಾರಿ ಆಗಿದ್ದರು. ಅವರಂತೆ ಪುನೀತ್ ರಾಜ್ ಕುಮಾರ್ ಸಹ ನಂದಿನಿ ಹಾಲಿನ ರಾಯಭಾರಿಯಾಗಲು ಹಣ ಪಡೆದುಕೊಂಡಿರಲಿಲ್ಲ. ಇದೀಗ ಇದೀಗ ಬಿಎಂಟಿಸಿ ಯಿಂದ ಕೂಡ ಯಾವುದೇ ಹಣ ಪಡೆದಿಲ್ಲ.

ಸದ್ಯ ಪುನೀತ್ ರಾಜ್ ಕುಮಾರ್ ‘ಯುವರತ್ನ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ 2020ಕ್ಕೆ ಬಿಡುಗಡೆ ಆಗಲಿದೆ. (ಎಂ.ಎನ್)

Leave a Reply

comments

Related Articles

error: