ದೇಶಪ್ರಮುಖ ಸುದ್ದಿ

ಮಕ್ಕಳ ಬಿಸಿಯೂಟಕ್ಕೂ ‘ಆಧಾರ್’ ಕಡ್ಡಾಯ ; ಕೇಂದ್ರದ ವಿರುದ್ಧ ಮಮತಾ ಕಿಡಿ

ಕೋಲ್ಕತಾ : ಕೇಂದ್ರ ಸರ್ಕಾರವು ಶಾಲಾ ಮಕ್ಕಳ ಬಿಸಿಯೂಟ ಕಾರ್ಯಕ್ರಮಕ್ಕೂ ಆಧಾರ್‍ ಕಾರ್ಡ್ ಕಡ್ಡಾಯ ಮಾಡಿರುವ ಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ.

ಆಧಾರ್ ಕಡ್ಡಾಯ ಮಾಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಸರಣಿಯಾಗಿ ಟ್ವೀಟ್ ಮಾಡುವ ಮೂಲಕ ಕೇಂದ್ರ ವಿರುದ್ಧ ಕಿಡಿಕಾರಿರುವ ಮಮತಾ, “ಇನ್ನು ಮುಂದೆ ನವಜಾತ ಶಿಶುಜಾತ ಶಿಶುವಿಗೂ ಅಧಾರ್ ಕಾರ್ಡ್ ಬೇಕಾಗುತ್ತದೆ.  ಮಕ್ಕಳ ಬಿಸಿಯೂಟಕ್ಕೂ ಆಧಾರ್ ಕಡ್ಡಾಯ ಮಾಡಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ” ಎಂದು ಹೇಳಿದ್ದಾರೆ.

ಕಡು ಬಡತನದಲ್ಲಿರುವ ಬಡವರಿಗೆ, ಮಕ್ಕಳಿಗೆ ಸಹಾಯ ಮಾಡುವ ಬದಲು, ಅವರನ್ನು ಇನ್ನು ಕೆಳಗೆ ಹಾಕಲಾಗುತ್ತಿದೆ. ಅವರ ಹಕ್ಕನ್ನೇ ಕಿತ್ತುಕೊಳ್ಳಲಾಗುತ್ತಿದೆ ಎಂದು ಟೀಕಿಸಿರುವ ಅವರು, ಜನರು ಆಧಾರ್‍ನಿಂದಾಗಿ ಖಾಸಗಿತನ ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಏಕೆ ಇಷ್ಟೊಂದು ಋಣಾತ್ಮಕವಾಗುತ್ತಿದೆ? ದೇಶದಲ್ಲಿರುವ ನಾವು ಇದನ್ನು ಖಂಡಿಸಲೇಬೇಕು ಎಂದಿದ್ದಾರೆ.

Leave a Reply

comments

Related Articles

error: