ಮೈಸೂರು

ಮಾಜಿ ಸಚಿವ ಜಿ.ಟಿ ದೇವೇಗೌಡ ಹೊಟ್ಟೆ ಕಿಚ್ಚಿನ ಮನುಷ್ಯ, ವಿಶ್ವನಾಥ್ ಸೋಲಿಗೆ ಜಿ.ಟಿ.ದೇವೇಗೌಡ ಕೂಡಾ ಕಾರಣ : ಒಕ್ಕಲಿಗ ಮುಖಂಡ ಸಿ.ಟಿ ರಾಜಣ್ಣ ವಾಗ್ದಾಳಿ

ಮೈಸೂರು,ಡಿ.14:- ಉಪ ಚುನಾವಣೆಯಲ್ಲಿ ವಿಶ್ವನಾಥ್ ಸೋಲಿಗೆ ಸಿ‌‌.ಪಿ ಯೋಗೇಶ್ವರ್ ಕಾರಣ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಜಿ.ಟಿ ದೇವೇಗೌಡರ ವಿರುದ್ಧ ಗುಡುಗಿರುವ ಹುಣಸೂರು ತಾಲೂಕು ಒಕ್ಕಲಿಗ ಮುಖಂಡ ಸಿ.ಟಿ ರಾಜಣ್ಣ,  ಜಿ ಟಿ ದೇವೇಗೌಡ ಹೊಟ್ಟೆ ಕಿಚ್ಚಿನ ಮನುಷ್ಯ. ವಿಶ್ವನಾಥ್ ಸೋಲಿಗೆ ಜಿ.ಟಿ.ದೇವೇಗೌಡ ಕೂಡಾ ಕಾರಣ ಎಂದು ವಾಗ್ದಾಳಿ ನಡೆಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ   ಮಾತನಾಡಿದ ಹುಣಸೂರು ತಾಲೂಕು ಒಕ್ಕಲಿಗ ಮುಖಂಡ ಸಿಟಿ ರಾಜಣ್ಣ, ಜಿ ಟಿ ದೇವೇಗೌಡ ಹೊಟ್ಟೆ ಕಿಚ್ಚಿನ ಮನುಷ್ಯ. ಈ ರೀತಿ ಸುಳ್ಳು ಹೇಳಿಕೆ ಗಳನ್ನು ನೀಡುವುದೇ ಅವರ ಚಾಳಿ. ಅವರ ಕುಟುಂಬ ಬಿಟ್ಟು ಯಾರ ಬೆಳವಣಿಗೆ ಸಹಿಸುವುದಿಲ್ಲ ಎಂದು ಹರಿಹಾಯ್ದರು.

ಚುನಾವಣಾ ಪ್ರಚಾರಕ್ಕಾಗಿ ಸಿ.ಪಿ ಯೋಗೇಶ್ವರ್ ಆಗಮಿಸಿದ್ದರು. ಯೋಗೇಶ್ವರ್ ವಿಚಾರ ಮಾತನಾಡಲು ಜಿ.ಟಿ.ದೇವೇಗೌಡ ಯಾರು  ಎಂದು ಪ್ರಶ್ನಿಸಿದ ರಾಜಣ್ಣ, ಜಿ.ಟಿ.ದೇವೇಗೌಡ ಜೆಡಿಎಸ್ ಅಭ್ಯರ್ಥಿ ಮನೆ ಹಾಳು ಮಾಡಿದ್ದಾರೆ. ಜಿ.ಟಿ.ದೇವೇಗೌಡ ಒಂದು ಪಕ್ಷದಲ್ಲಿ ಇದ್ದು ಇವರೇ ಕಾಂಗ್ರೆಸ್ ಅಭ್ಯರ್ಥಿ ಗೆ ಸಹಕಾರ ನೀಡಿದ್ದಾರೆ. ನನಗೂ ಕೂಡ 2013ರಲ್ಲಿ ಟಿಕೆಟ್ ತಪ್ಪಿಸಿದ್ದರು. ತೊಟ್ಟಲು ತೂಗುವುದು, ಮಗುವನ್ನು ಚಿವುಟುವುದು ಇವರ ಚಾಳಿ. ವಿಶ್ವನಾಥ್ ಸೋಲಿಗೆ ಜಿ.ಟಿ.ದೇವೇಗೌಡ ಕೂಡಾ ಕಾರಣ ಎಂದು ಆರೋಪಿಸಿದರು.

ಬಿಜೆಪಿಯಲ್ಲಿದ್ದಾಗ ಎಲ್ಲಾ ಸಂಪನ್ಮೂಲಗಳನ್ನು ಪಡೆದಿದ್ದಾರೆ. ಸಿ ಪಿ ಯೋಗೇಶ್ವರ್ ಅವರು ಸಮುದಾಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಜಿ. ಟಿ .ದೇವೇಗೌಡರ ವಿರುದ್ಧ   ವಾಗ್ದಾಳಿ ನಡೆಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: