ಕ್ರೀಡೆ

ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಸ್ಯಾಮ್ ಬಿಲ್ಲಿಂಗ್ಸ್

ಕೋಲ್ಕತ್ತಾ,ಡಿ.14-ಇಂಡಿಯನ್ ಪ್ರೀಮಿಯರ್ ಲೀಗ್ ನ ಹರಾಜಿನಿಂದ ದೂರ ಉಳಿಯಲು ಇಂಗ್ಲೆಂಡ್ ನ ಬ್ಯಾಟ್ಸಮನ್ ಸ್ಯಾಮ್ ಬಿಲ್ಲಿಂಗ್ಸ್ ನಿರ್ಧರಿಸಿದ್ದಾರೆ.

ಐಪಿಎಲ್ ಹರಾಜಿಗೆ ಒಂದು ವಾರವಿರುವಾಗ ಸ್ಯಾಮ್ ಬಿಲ್ಲಿಂಗ್ಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಕೇವಲ ಐಪಿಎಲ್ ಮಾತ್ರವಲ್ಲದೆ ಯಾವುದೇ ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಆಡದೇ ಇರಲು ಸ್ಯಾಮ್ ಬಿಲ್ಲಿಂಗ್ಸ್ ನಿರ್ಧರಿಸಿದ್ದಾರೆ.

ಇಂಗ್ಲೆಂಡ್ ನ ದೇಶಿಯ ಕೂಟ ಕೌಂಟಿ ಕ್ರಿಕೆಟ್ ನಲ್ಲಿ ಆಡುವತ್ತ ಸ್ಯಾಮ್ ಬಿಲ್ಲಿಂಗ್ಸ್ ಗಮನ ಹರಿಸುತ್ತಿದ್ದು, ಐಪಿಎಲ್ ಆಡದೇ ಇರಲು ಯೋಚಿಸಿದ್ದಾರೆ.

2016ರಲ್ಲಿ ಡೆಲ್ಲಿ ಪರ ಆಡಿದ್ದ ಸ್ಯಾಮ್ ನಂತರ 2018 ಮತ್ತು 2019ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದರು. ಈ ವರ್ಷದ ಬಿಡ್ಡಿಂಗ್ ಗೆ ಸಿಎಸ್ ಕೆ ಸ್ಯಾಮ್ ರನ್ನು ಬಿಡುಗಡೆಗೊಳಿಸಿತ್ತು.

ಇದೇ ತಿಂಗಳ 19ರಂದು ಐಪಿಎಲ್ ಹರಾಜು ನಡೆಯಲಿದ್ದು, ಕೋಲ್ಕತ್ತಾದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂತಿಮವಾಗಿ 332 ಮಂದಿ ಹರಾಜು ಕಣದಲ್ಲಿದ್ದು, 72 ಸ್ಥಾನಗಳಿಗೆ ಬಿಡ್ಡಿಂಗ್ ನಡೆಯಲಿದೆ. (ಎಂ.ಎನ್)

Leave a Reply

comments

Related Articles

error: