ದೇಶಪ್ರಮುಖ ಸುದ್ದಿವಿದೇಶ

ಆರ್ಥಿಕ ಕಾರಿಡಾರ್ ಬೆಂಬಲಿಸುವ ಚೀನಾ ಮನವಿ ತಿರಸ್ಕರಿಸಿದ ಭಾರತ

ನವದೆಹಲಿ : ಪಾಕಿಸ್ತಾನದ ಮೂಲಕ ಹಾದುಹೋಗುವ ಚೈನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ಯೋಜನೆ – ಸಿಪಿಇಸಿ ಜೊತೆ ಕೈಜೋಡಿಸುವಂತೆ ಭಾರತಕ್ಕೆ ಚೀನಾ ಮನವಿ ಮಾಡಿದೆ.

ಯೋಜನೆಯಿಂದ ಸ್ಥಳೀಯ ಸಂಪರ್ಕಕ್ಕೆ ಉತ್ತೇಜನ ಸಿಗಲಿದ್ದು, ಭಾರತಕ್ಕೆ ಬಹಳ ಪ್ರಯೋಜನವಿದೆ ಎಂದು ಹೇಳಿರುವ ಚೀನಾ, ಭಾರತದ ಮನವೊಲಿಸಲು ಪ್ರಯತ್ನಿಸುತ್ತಿದೆ. ಏಕೆಂದರೆ, ಭಾರತವೂ ಕೂಡ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಈ ಯೋಜನೆ ಕಾರ್ಯಗತವಾಗದಿದ್ದರೆ ಚೀನಾದ “ಬೆಲ್ಟ್ ಮತ್ತು ರಸ್ತೆ” ಯೋಜನೆ ಕೈಗೂಡುವುದು ಕಷ್ಟವಾಗಲಿದೆ.

ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ವಕ್ತಾರ ಫು ಯಿಂಗ್ ಅವರು ಇಂಡಿಯಾ ಟುಡೆ ಜೊತೆ ಮಾತನಾಡುತ್ತಾ, “ಬೆಲ್ಟ್ ಅಂಡ್ ರೋಡ್” ಆರ್ಥಿಕ ಬೆಳವಣಿಗೆಗೆ ಸಂಪರ್ಕ ಕಾರ್ಯಕ್ರಮವಾಗಿದ್ದು ಇದರಿಂದ ಭಾರತಕ್ಕೆ ಬಹಳ ಪ್ರಯೋಜನವಿದೆ. ಹೀಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಆರಂಭಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದ್ದಾರೆ.

” ಆರ್ಥಿಕ ಕಾರಿಡಾರ್ ಯೋಜನೆ ಪಾಕ್ ಆಕ್ರಮಿತ ಕಾಶ್ಮೀರ ಮೂಲಕ ಹಾದುಹೋಗುತ್ತದೆ. ಹೀಗಾಗಿ ಇದು ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸಿದಂತೆ ಎಂದಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು, ಸಾರ್ವಭೌಮತ್ವ ವಿಷಯವೇ ಮೊದಲ ಆದ್ಯತೆಯಾಗುತ್ತದೆಯೇ ಹೊರತು ಸಾರಿಗೆ ಸಂಪರ್ಕವಲ್ಲ ಎಂದಿದ್ದಾರೆ.

Leave a Reply

comments

Related Articles

error: