
ಪ್ರಮುಖ ಸುದ್ದಿ
ರಾಬ್ಡಿ ದೇವಿ ಕೂದಲು ಎಳೆದು ಹಲ್ಲೆ ನಡೆಸಿದರು : ತನ್ನ ಮೇಲೆ ನಡೆದ ದೌರ್ಜನ್ಯ ವಿವರಿಸಿದ ಲಾಲು ಪ್ರಸಾದ್ ಯಾದವ್ ಸೊಸೆ ಐಶ್ವರ್ಯಾ
ದೇಶ(ನವದೆಹಲಿ)ಡಿ.16:- ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರ ಮುಂದೆ ಹೈಡ್ರಾಮಾ ನಡೆದಿದ್ದು, ಲಾಲು ಪ್ರಸಾದ್ ಯಾದವ್ ಪುತ್ರ ತೇಜಪ್ರತಾಪ್ ಯಾದವ್ ಅವರ ಪತ್ನಿ ಐಶ್ವರ್ಯಾ ರೈ ತನ್ನ ಮೇಲೆ ನಡೆದ ದೌರ್ಜನ್ಯವನ್ನು ವಿವರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ತನ್ನ ಕೂದಲನ್ನು ಎಳೆದರಲ್ಲದೇ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಲಾಲು ಕುಟುಂಬದ ಸೊಸೆ ಐಶ್ವರ್ಯಾ ಆರೋಪಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಇದು ಎರಡನೇ ಬಾರಿಗೆ ಐಶ್ವರ್ಯಾ ತನ್ನ ಪತಿಯ ಮನೆಯವರ ವಿರುದ್ಧ ಆರೋಪಿಸಿದ್ದಾರೆ.
ರಾಬ್ಡಿ ದೇವಿ ನನ್ನ ಕೂದಲನ್ನು ಎಳೆದು ಹೊಡೆದರು ಎಂದು ಐಶ್ವರ್ಯ ಹೇಳಿದ್ದಾರೆ. ಅದರ ನಂತರ, ನನ್ನನ್ನು ಅಂಗರಕ್ಷಕರ ಮೂಲಕ ಮನೆಯಿಂದ ಬಲವಂತವಾಗಿ ಹೊರ ಹಾಕಲಾಯಿತು. ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರು ಸೊಸೆ ಐಶ್ವರ್ಯಾ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಪೊಲೀಸರನ್ನು ತಲುಪಿದ್ದು, ಪೊಲೀಸರು ರಾಬ್ಡಿ ದೇವಿ ಅವರ ನಿವಾಸಕ್ಕೆ ಬಂದು ಪ್ರಕರಣದ ತನಿಖೆ ನಡೆಸಿದ್ದಾರೆ. (ಎಸ್.ಎಚ್)