ದೇಶಪ್ರಮುಖ ಸುದ್ದಿ

ಹೆಚ್-1ಬಿ ವೀಸಾ ತ್ವರಿತ ಪ್ರಕ್ರಿಯೆ ತಾತ್ಕಾಲಿಕ ರದ್ದು ; ಭಾರತದ ಹೊರಗುತ್ತಿಗೆ ಕಂಪನಿಗಳಿಗೆ ಹಿನ್ನಡೆ

ವಾಷಿಂಗ್ಟನ್ ಡಿಸಿ : ಕೌಶಲವುಳ್ಳ ವಿದೇಶಿ ಕೆಲಸಗಾರರನ್ನು ಐಟಿ ಕಂಪನಿಗಳು ಅಧಿಕ ಸಂಬಳ ಕೊಟ್ಟು ನೇಮಕ ಮಾಡಿಕೊಳ್ಳಲು ಸಹಾಯವಾಗುವ ಎಚ್‍-1ಬಿ ತ್ವರಿತ ವೀಸಾ ನೀಡಿಕೆಗೆ ಅಮೆರಿಕದಲ್ಲಿ ತಾತ್ಕಾಲಿಕ ತಡೆಯೊಡ್ಡಲಾಗಿದೆ. ಅಮೆರಿಕನ್ನರಿಗೆ ಹೆಚ್ಚು ಉದ್ಯೋಗ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ನೂತನ ಅಧ್ಯಕ್ಷ ಡೊನಾಲ್ಡ್‍ ಟ್ರಂಪ್ ಅವರು ಒಂದೊಂದೇ ಹೆಜ್ಜೆಯನ್ನಿಡುತ್ತಿದ್ದು, ತ್ವರಿತ ವೀಸಾ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಅಮೆರಿಕ ಸರ್ಕಾರ ಪ್ರತಿವರ್ಷ ಸುಮಾರು 85,000 ಹೆಚ್-1ಬಿ ವೀಸಾ ನೀಡುತ್ತದೆ. ಭಾರತದ ಹೊರಗುತ್ತಿಗೆ ಕಂಪೆನಿಗಳು ಪ್ರತಿವರ್ಷ ಈ ವೀಸಾವನ್ನು ಹೆಚ್ಚು ಬಳಸಿಕೊಳ್ಳುತ್ತವೆ. ಎಚ್ -1 ಬಿ ವೀಸಾಗೆ ಅರ್ಜಿ ಹಾಕಿದ ಮೇಲೆ ವೀಸಾ ಸಿಗಲು ಅನೇಕ ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ತ್ವರಿತವಾಗಿ 15 ದಿನಗಳಲ್ಲಿ 1,225 ಡಾಲರ್‍ಗೆ ವೀಸಾ ನೀಡುವ ಸೌಲಭ್ಯ ಜಾರಿಯಲ್ಲಿತ್ತು. ಆದರೆ ಇದೀಗ ಆ ಸೌಲಭ್ಯವನ್ನು 6 ತಿಂಗಳವರೆಗೆ ರದ್ದು ಮಾಡಲಾಗಿದೆ ಎಂದು ಅಮೆರಿಕಾ ನಾಗರಿಕತ್ವ ಮತ್ತು ವಲಸೆ ಸೇವೆ (ಯುಎಸ್‍ಸಿಐಎಸ್) ತಿಳಿಸಿದೆ.

ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರದ ವೇಳೆ ಮತ್ತು ಅಧ್ಯಕ್ಷರಾಗಿ ಆಯ್ಕೆಯಾದ ನಂತರವೂ ಹೆಚ್-01 ಬಿ ವೀಸಾ ಭಾರೀ ಪ್ರಚಾರ ಪಡೆದುಕೊಂಡಿತ್ತು. ಈ ವೀಸಾವನ್ನು ವಿದೇಶಗಳ ಎಂಜಿನಿಯರ್, ವೈದ್ಯರು, ಕಂಪ್ಯೂಟರ್ ಕೆಲಸಗಾರರು ಮತ್ತು ಇತರ ನುರಿತ ಕೆಲಸಗಾರರು ಬಳಸುತ್ತಾರೆ.

Leave a Reply

comments

Related Articles

error: