ಮೈಸೂರು

ಫಿರಂಗಿ ಸಿಡಿಸಿ ತಾಲೀಮು

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಾಮುಂಡಿ ಮೈದಾನದಲ್ಲಿ ಭಾನುವಾರ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಂಡಾನೆ ಅರ್ಜುನ ಸಮ್ಮುಖ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ಫಿರಂಗಿ ಸಿಡಿಸುವ ತಾಲೀಮು ನಡೆಸಿದರು. 12 ಆನೆಗಳು ಮತ್ತು 21 ಅಶ್ವಗಳು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿದ್ದು ಅವುಗಳೂ ಸಹ ಈ ತಾಲೀಮಿನಲ್ಲಿ ಭಾಗವಹಿಸಿದ್ದವು.

ಪೊಲೀಸ್ ಆಧಿಕಾರಿಗಳು 21 ಭಾರಿ ಫಿರಂಗಿ ಸಿಡಿಸಿದರು. ಆನೆಗಳು ಮತ್ತು ಕುದುರೆಗಳು ಫಿರಂಗಿಯಿಂದ ಹೊರಬರುವ ಭಾರೀ ಸದ್ದಿಗೆ  ಭಯಗೊಳ್ಳದೇ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವುದೇ ತಾಲೀಮಿನ ಉದ್ದೇಶ. ಪ್ರಶಾಂತ ಮತ್ತು ದುರ್ಗಾಪರಮೇಶ್ವರಿ ಆನೆಗಳು ಕಳೆದ ಬಾರಿ ನಡೆಸಿದ ತಾಲೀಮಿನಲ್ಲಿ ವಿಚಲಿತರಾಗಿದ್ದ ಹಿನ್ನೆಲೆಯಲ್ಲಿ ಅವರ ಕಾಲಿಗೆ ಸರಪಳಿಯಿಂದ ಬಂಧಿಸಲಾಗಿತ್ತು. ಅರ್ಜುನ, ಬಲರಾಮ, ಅಭಿಮನ್ಯು, ವಿಕ್ರಮ ಸೇರಿದಂತೆ ಇನ್ನುಳಿದ ಆನೆಗಳು ಶಾಂತರಾಗಿ ಪಾಲ್ಗೊಂಡಿದ್ದು ಕಂಡು ಬಂತು.

ಸಿಟಿಟುಡೆಯೊಂದಿಗೆ ಪಶುವೈದ್ಯ ನಾಗರಾಜ್ ಮಾತನಾಡಿ ಕಳೆದ ವರ್ಷ ಪ್ರಶಾಂತ, ದುರ್ಗಾಪರಮೇಶ್ವರಿ, ಗೋಪಾಲಸ್ವಾಮಿ ಗಲಿಬಿಲಿಗೊಂಡಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಬಂಧಿಸಿ ತಾಲೀಮು ನಡೆಸಲಾಗಿತ್ತು. ಆದರೆ ಈ ಬಾರಿ ಅವು ಶಬ್ದಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿವೆ. ಗೋಪಿ ಮತ್ತು ಅಭಿಮನ್ಯು ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು ಆದರೆ ಅವರೀಗ ಸುಧಾರಿಸಿಕೊಂಡಿದ್ದಾರೆ ಎಂದರು.

ಮುಂದಿನ ತಾಲೀಮು ಬುಧವಾರ ಮತ್ತು ಗುರುವಾರ ನಡೆಯಲಿದೆ. ಅರಣ್ಯಾಧಿಕಾರಿ ಗಣೇಶ್ ಭಟ್, ಡಿವೈಎಸ್ ಪಿ ಹೆಚ್.ಟಿ.ಶೇಖರ್, ನಗರ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ ಪಿ ಬಿ.ವಿ.ಕಿತ್ತೂರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Tags

Related Articles

error: