ಮೈಸೂರು

ನೀರಿನಲ್ಲಿ ಮುಳುಗಿ ಶಬರಿಮಲೆಗೆ ಹೊರಟ್ಟಿದ್ದ ಪೇದೆ ಸಾವು

ಮೈಸೂರು,ಡಿ.16- ಶಬರಿಮಲೆಗೆ ಹೊರಟಿದ್ದ ಪೊಲೀಸ್ ಪೇದೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಜೋಡಿ ಲಿಂಗದಹಳ್ಳಿ ನಿವಾಸಿ ಚಿದಾನಂದ (30) ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿದ ಪೇದೆ. ಇವರು ಕಡೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಅಯ್ಯಪ್ಪ ಸ್ವಾಮಿ ಮಾಲಾಧಾರಣೆ ಮಾಡಿ ನಿನ್ನೆ ಶಬರಿಮಲೆಗೆ ಹೊರಟಿದ್ದ ಚಿದಾನಂದ ಅವರು ಮೈಸೂರಿನ ನಂಜನಗೂಡು ಸಮೀಪದ ಕಳಲೆ ನಾಲೆಯಲ್ಲಿ ಈಜಲು ತೆರಳಿದ್ದಾರೆ. ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಮೃತದೇಹ ಪತ್ತೆಯಾಗಿದೆ. ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ಎಂ.ಎನ್)

Leave a Reply

comments

Related Articles

error: