ಪ್ರಮುಖ ಸುದ್ದಿ

ಪ್ಯಾನ್ ಕಾರ್ಡ್​ಗೆ ಆಧಾರ್ ಸಂಖ್ಯೆ ಜೋಡಿಸಲು ಡಿ. 31 ಕೊನೆಯ ದಿನ

ದೇಶ(ನವದೆಹಲಿ)ಡಿ.16:-  ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್​ಗೆ ಆಧಾರ್ ಸಂಖ್ಯೆ ಜೋಡಿಸಲು ಡಿ. 31 ಕೊನೆಯ ದಿನ ಎಂದು ಹೇಳಿದೆ.

ಸೌಲಭ್ಯ ಪಡೆಯಲು ಪ್ಯಾನ್ ​ಗೆ ಶೀಘ್ರ ಆಧಾರ್ ಸಂಖ್ಯೆ ಜೋಡಣೆ ಮಾಡಿ ಎಂದು ಇಲಾಖೆ ಮನವಿ ಮಾಡಿಕೊಂಡಿದೆ. ಸೆ.30ಕ್ಕೆ ಇದ್ದ ಕೊನೆಯ  ದಿನಾಂಕವನ್ನು ಈ ವರ್ಷಾಂತ್ಯದವರೆಗೂ ಕೇಂದ್ರೀಯ ನೇರ ತೆರಿಗೆ ಮಂಡಳಿ ವಿಸ್ತರಿಸಿತ್ತು. ಆಧಾರ್ ಸಂಖ್ಯೆ ಕಡ್ಡಾಯ ಕುರಿತ ತಕರಾರು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ನೀಡಿದ ತೀರ್ಪಿನಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಸಂಖ್ಯೆ ನೀಡಬೇಕು ಮತ್ತು ಆದಾಯ ತೆರಿಗೆ ಸಲ್ಲಿಸಲು ಆಧಾರ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್​ಗೆ ಜೋಡಿಸಿರಬೇಕು ಎಂದು ಸೂಚಿಸಿತ್ತು. (ಎಸ್.ಎಚ್)

Leave a Reply

comments

Related Articles

error: