ಮೈಸೂರು

ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ : ಆರ್.ಕೆ.ರಾಘವನ್

ಸಂಗೀತ ಮನುಷ್ಯನನ್ನು ಆಧ್ಯಾತ್ಮದತ್ತ ಕರೆದೊಯುತ್ತದೆ. ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಸಂಗೀತ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಮಕ್ಕಳಿಗೆ ಸಂಗೀತಾಭ್ಯಾಸ ಮಾಡಿಸಬೇಕು ಎಂದು ವೈಣಿಕ ವಿದ್ವಾನ್ ಆರ್.ಕೆ.ರಾಘವನ್ ತಿಳಿಸಿದರು.

ಮೈಸೂರಿನ  ವಿಜಯನಗರ ಒಂದನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನದ ಕಲಾಭಾರತಿ ವಿಭಾಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರೀ ಪುರಂದರದಾಸರ, ಶ್ರೀ ತ್ಯಾಗರಾಜರ ಮತ್ತು ಕನಕದಾಸರ ಆರಾಧಾನಾ ಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನದ ಅಧ್ಯಕ್ಷ ಡಾ.ಎ.ವಿ.ನರಸಿಂಹಮೂರ್ತಿ, ಖಜಾಂಚಿ ಡಾ.ಎ.ಟಿ.ಭಾಷ್ಯಂ, ಸಮಿತಿ ಸದಸ್ಯ ಟಿ.ಎಸ್.ಬಾಲಸುಬ್ರಹ್ಮಣ್ಯ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: