ಮೈಸೂರು

ಪ್ರಕೃತಿ ಸಂರಕ್ಷಣೆಗೆ ಪ್ರತ್ಯೇಕ ಪ್ರಯತ್ನ ನಡೆಸಬೇಕು : ಮಾತಾ ಅಮೃತಾನಂದಮಯಿ

ಮೈಸೂರಿನ ಮಾತಾ ಅಮೃತಾನಂದಮಯಿ ಮಠದ ಮೈಸೂರು ಶಾಖೆಯ 17ನೆಯ ವಾರ್ಷಿಕೋತ್ಸವ ಮತ್ತು ಸೇವಾ ಯೋಜನೆಗಳ ವಿತರಣೆಯ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾನುವಾರ ಮೈಸೂರಿಗೆ ಆಗಮಿಸಿದ್ದ ಶ್ರೀ ಮಾತಾ ಅಮೃತಾನಂದಮಯಿ ದೇವಿ ಅಮ್ಮ ಅವರು ಬೋಗಾದಿಯಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಆವರಣದಲ್ಲಿ ಸಹಸ್ರ ಜನರ ನಡುವೆ ಜರುಗಿದ ಸಮಾರಂಭದಲ್ಲಿ ಪಾಲ್ಗೊಂಡರು.

ಬಳಿಕ ಮಾತನಾಡಿದ ಅವರು ಪ್ರಕೃತಿಯ ಶೋಷಣೆ ಇಂದು ಮನುಷ್ಯರನ್ನು ಬಾಧಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ.  ಹಿಂದೆ ನಮ್ಮ ಹಿರಿಯರು ಪ್ರಕೃತಿ ಸಂರಕ್ಷಣೆಗೆಂದು ಪ್ರತ್ಯೇಕ ಪ್ರಯತ್ನ ಮಾಡುತ್ತಿರಲಿಲ್ಲ. ಅವರ ಜೀವನ ಶೈಲಿಯೇ ಪ್ರಕೃತಿಯನ್ನು ರಕ್ಷಿಸುವಂಥದಾಗಿತ್ತು. ಜೀವನ ಶೈಲಿ, ಆರಾಧನೆ ಮತ್ತು ಆಚರಣೆಗಳು ಪ್ರಕೃತಿಗೆ ಹತ್ತಿರವಾಗಿತ್ತು. ಆದರೆ, ಇಂದು ಜಗತ್ತಿನಲ್ಲಿ ಜನ ಪ್ರಕೃತಿಯಿಂದ ಯಾವುದೇ ಇತಿಮಿತಿ ಇಲ್ಲದೇ ದೋಚುತ್ತಿರುವುದನ್ನು ಕಾಣುತ್ತಿದ್ದೇವೆ. ಹಾಗೆ ಹಲವು ಸಂಕಷ್ಟಗಳಿಗೂ ಸಿಲುಕುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭ  ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಹಾಪೌರ ಎಂ.ಜೆ.ರವಿಕುಮಾರ್ ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ,  ನಗರ ಪಾಲಿಕೆ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವಪ್ಪ, ನಗರ ಪಾಲಿಕೆ ಸದಸ್ಯ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: