ಪ್ರಮುಖ ಸುದ್ದಿ

ಪೌರತ್ವ ತಿದ್ದುಪಡಿ ಕಾಯಿದೆಗೆ ವಿರೋಧ :  ಬಿಹಾರದಲ್ಲಿ 500   ಎಫ್‌ಐಆರ್ ದಾಖಲು

ದೇಶ(ನವದೆಹಲಿ)ಡಿ.17:- ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ  ಪ್ರತಿಭಟನೆಗಳು ನಡೆದವು.

ವಿವಿಧ ಸಂಘಟನೆಗಳ  ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಸಹ ಪ್ರದರ್ಶನಕ್ಕೆ ಬೆಂಬಲ ನೀಡುತ್ತಿರುವುದು ಕಂಡುಬಂತು.  ಕೆಲವು ಸ್ಥಳಗಳಲ್ಲಿ, ಈ ಪ್ರದರ್ಶನಗಳು ಶಾಂತಿಯುತವಾಗಿದ್ದರೆ, ಬೇರೆಡೆ ಅದು ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿತು. ಅದೇ ಸಮಯದಲ್ಲಿ, ಜಾಮಿಯಾ ಹಿಂಸಾಚಾರದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.   ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ  ಪ್ರತಿಭಟನೆಗಳು ಪಶ್ಚಿಮ ಬಂಗಾಳ, ದೆಹಲಿಯಿಂದ ಅಲಿಗಢ   ಮತ್ತು ಯುಪಿ ಯ ಲಕ್ನೋ ವರೆಗೆ ನಡೆದಿದೆ.

ಪ್ರತಿಭಟನೆ ವೇಳೆ ಗಲಭೆಗಳು ನಡೆದಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ.   ಸುಪ್ರೀಂ ಕೋರ್ಟ್ ಹಿಂಸಾಚಾರವನ್ನು   ತಕ್ಷಣ ನಿಲ್ಲಿಸಬೇಕು ಎಂದು ಹೇಳಿದ್ದು, ಇಂದು ಸುಪ್ರೀಂ ಕೋರ್ಟ್ ಕೂಡ ಈ ವಿಷಯವನ್ನು ಆಲಿಸಲಿದೆ.

ಕಾರ್ಗಿಲ್ ಚೌಕ್ ಬಳಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ದುಷ್ಕರ್ಮಿಗಳು  ವಾಹನಗಳಿಗೆ ಬೆಂಕಿ ಹಚ್ಚಿದ್ದು, 500 ಮಂದಿ ಅಪರಿಚಿತ ವ್ಯಕ್ತಿಗಳ ವಿರುದ್ಧ   ಎಫ್‌ಐಆರ್ ದಾಖಲಿಸಲಾಗಿದೆ. ಇದಲ್ಲದೆ ಆರು ಆರೋಪಿಗಳನ್ನು ಸಹ ಬಂಧಿಸಲಾಗಿದೆ. ವಿಶೇಷವೆಂದರೆ, ಸೋಮವಾರ ನಡೆದ ಪ್ರದರ್ಶನದಲ್ಲಿ, ದುಷ್ಕರ್ಮಿಗಳು   ಹಲವಾರು ಮೋಟರ್ ಸೈಕಲ್‌ಗಳಿಗೆ ಬೆಂಕಿ ಹಚ್ಚಿ ಅನೇಕ ಸರ್ಕಾರಿ ಮತ್ತು ಖಾಸಗಿ ವಾಹನಗಳನ್ನು ಹಾನಿಗೊಳಿಸಿದ್ದಾರೆ.

ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಅಶ್ರುವಾಯು ಸಿಡಿಸಿದ್ದಾರೆ ಎನ್ನಲಾಗಿದೆ. (ಎಸ್.ಎಚ್)

Leave a Reply

comments

Related Articles

error: