ಮೈಸೂರು

ಎರಡು ವರ್ಷಗಳ ಕಾಲ ಮುಚ್ಚಲಿರುವ ಬಿಳಿಗಿರಿ ರಂಗನಾಥ ದೇವಾಲಯ

ಚಾಮರಾಜನಗರ ಜಿಲ್ಲೆಯಲ್ಲಿರುವ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯವನ್ನು ಎರಡು ವರ್ಷಗಳ ಕಾಲ ಮುಚ್ಚಲಾಗುತ್ತದೆ. ಮಾರ್ಚ್ 15ರಂದು ದೇವಾಲಯದಲ್ಲಿ ಕೊನೆಯ ಪೂಜೆ ನಡೆಯಲಿದೆ.
500 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿರುವ ಈ ದೇವಾಲಯ ಸಂಪೂರ್ಣವಾಗಿ ಶಿಥಿಲಗೊಂಡಿಗೊಂಡಿರುವ ಹಿನ್ನೆಲೆಯಲ್ಲಿ  ದೇವಾಲಯವನ್ನು 2.90 ಕೋಟಿ ವೆಚ್ಚದಲ್ಲಿ ದುರಸ್ಥಿ ಮಾಡಲಾಗುತಿದೆ. ಹಣವನ್ನು ರಾಜ್ಯ ಪುರಾತತ್ವ ಇಲಾಖೆ ದೇವಾಲಯದ ದುರಸ್ತಿಗೆ  ಬಿಡುಗಡೆ ಮಾಡಿದೆ.
ಮಾರ್ಚ್ 15ರ ತನಕ ಭಕ್ತರು ರಂಗನಾಥ ಸ್ವಾಮಿಯ ದರ್ಶನ ಪಡೆಯಬಹುದು. ಮಾರ್ಚ್ 15ರ ಪೂಜೆಯ ವಿಧಿವಿಧಾನದ ಬಳಿಕ ದೇವರ ವಿಗ್ರಹಗಳನ್ನು ಮುಚ್ಚಿಡಲಾಗುತ್ತದೆ. ಮಾರ್ಚ್ 18ರಂದು ಧಾರ್ಮಿಕ ದತ್ತಿ ಇಲಾಖೆಗೆ ದೇವಾಲಯವನ್ನು ಹಸ್ತಾಂತರ ಮಾಡಲಾಗುತ್ತದೆ.
ಈಗಿರುವ ಪ್ರಾಚೀನ ಶೈಲಿಯಲ್ಲಿಯೇ ದೇವಾಲಯವನ್ನು ಅಭಿವೃದ್ಧಿ ಮಾಡಲಾಗುತ್ತದೆ. ಆದ್ದರಿಂದ, ಮುಂದಿನ ಎರಡು ವರ್ಷಗಳ ತನಕ ದೇವಾಲಯವನ್ನು ಮುಚ್ಚಲಾಗುತ್ತದೆ. ಎರಡು ವರ್ಷಗಳ ಕಾಲ ನಡೆಯಬೇಕಿದ್ದ ಚಿಕ್ಕ ಮತ್ತು ದೊಡ್ಡ ರಥೋತ್ಸವಗಳನ್ನು ರದ್ದುಮಾಡಲಾಗಿದೆ ಎಂದು ತಿಳಿದು ಬಂದಿದೆ.

Leave a Reply

comments

Related Articles

error: