ಮೈಸೂರು

ಬೋನಿಗೆ ಸೆರೆಸಿಕ್ಕ ಚಿರತೆ

ಕಳೆದೊಂದು ವಾರದ ಹಿಂದೆ ಪ್ರತ್ಯಕ್ಷಗೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಚಿರತೆ ಬೋನಿಗೆ ಸೆರೆ ಸಿಕ್ಕ ಘಟನೆ ಮೈಸೂರು ತಾಲೂಕಿನ ಆಯರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಆಯರಹಳ್ಳಿಯ ಜವನಪ್ಪ ಎಂಬುವರ ತೋಟದಲ್ಲಿ ಕಳೆದೊಂದು ವಾರದ ಹಿಂದೆ ಚಿರತೆಯೊಂದು ಕಾಣಿಸಿಕೊಂಡು ಭಯದ ವಾತಾವರಣ ಸೃಷ್ಟಿಸಿತ್ತು. ತಕ್ಷಣ ಸ‍್ಥಳೀಯರು ಅರಣ್ಯ ಇಲಾಖಾ ಸಿಬ್ಬಂದಿಗೆ ವಿಷಯ ರವಾನಿಸಿದ್ದರು. ಸಿಬ್ಬಂದಿಗಳು ಚಿರತೆಯನ್ನು ಸೆರೆ ಹಿಡಿಯಲು ಬೋನೊಂದನ್ನು ತಂದಿರಿಸಿದ್ದು ಸೋಮವಾರ ಚಿರತೆ ಬೋನಿಗೆ ಸೆರೆ ಸಿಕ್ಕಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

 

 

Leave a Reply

comments

Related Articles

error: