ಮನರಂಜನೆ

ನಟಿ ರಾಧಿಕಾ ಅಪ್ಟೆಗೂ ಲೈಂಗಿಕ ಕಿರುಕುಳ

ಮೈ ಚಳಿ ಬಿಟ್ಟು ನಟಿಸಿ ಸಾಕಷ್ಟು ಸುದ್ದಿ ಮಾಡುವ ನಟಿ ರಾಧಿಕಾ ಅಪ್ಟೆ, ಇಡೀ ಭಾರತ ಚಿತ್ರರಂಗವೇ ಚೆಚ್ಚಿ ಬೀಳುವಂತಹ ಹೇಳಿಕೆ ನೀಡಿದ್ದಾರೆ. ಸಿನಿಮಾದಲ್ಲಿ ನಟಿಸಲು ತಂತ್ರಜ್ಞರೊಬ್ಬರು ಲೈಂಗಿಕವಾಗಿ ಸಹಕರಿಸಲು ಕೋರಿದ್ದರು, ಆದರೆ ನಾನು ಅದನ್ನು ನಿರಾಕರಿಸಿದ್ದೆ ಎಂದು ಹೇಳಿದ್ದಾರೆ
ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವಾಗ ಇಂತದ್ದೊಂದು ಕೆಟ್ಟ ಅನುಭವ ಆಗಿತ್ತಂತೆ. ಇಲ್ಲಿನ ತಂತ್ರಜ್ಞರೊಬ್ಬರು ಆಕೆಯೊಂದಿಗೆ ಮಾತನಾಡುತ್ತಾ, ‘ ಚಿತ್ರವನ್ನು ಹಿಂದಿಯಲ್ಲೂ ಮಾಡಲು ಕೆಲವರು ಸಜ್ಜಾಗಿದ್ದಾರೆ. ನೀವೇ ನಾಯಕಿಯಾಗಿ ನಟಿಸಲಿದ್ದೀರಿ. ಅವರೊಂದಿಗೆ ಸಹಕರಿಸಲು ನೀವು ಸಿದ್ಧರಿದ್ದೀರಾ ಎಂದು ಕೇಳಿದ್ದರಂತೆ. ಆದರೆ ಅದನ್ನು ನಿರಾಕರಿಸಿದ ಅವರು ಅವನಿಗೆ ನರಕಕ್ಕೆ ಹೋಗಲು ಹೇಳು ಎಂದು ಹೇಳಿದ್ದರಂತೆ ಹಿಂದೆ ಸಿನಿಮಾಗಳಲ್ಲಿ ಟಾಪ್ಲೆಸ್ ಆಗಿರುವ ವಿಡಿಯೋಗಳು ರಿಲೀಸ್ ಆಗಿ ವಿವಾದಕ್ಕೆ ಕಾರಣವಾಗಿತ್ತು.

ರಾಧಿಕಾ ಮುಖ್ಯ ಪಾತ್ರದಲ್ಲಿ ನಟಿಸಿರುವ  ಶುಕ್ರವಾರ ಬಿಡುಗಡೆಯಾಗಿರುವಪಾರ್ಚ್ಡ್ಸಿನಿಮಾಕ್ಕೆ ಸಂಬಂಧಿಸಿದಂತೆಯೂ ವಿವಾದವೊಂದು ಸೃಷ್ಟಿಯಾಗಿತ್ತು. ಥಿಯೇಟರ್ಗೆ ಬರುವ ಮುನ್ನ ಚಿತ್ರ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತ್ತು. ಕಿಡಿಗೇಡಿಗಳು ಚಿತ್ರದ ಒಂದೆರಡು ಬೋಲ್ಡ್ ಸನ್ನಿವೇಶಗಳನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಬಿಟ್ಟಿದ್ದರು. ಸಿನಿಮಾ ಪ್ರಚಾರಕ್ಕಾಗಿ ಬೇಕೆಂದೇ ವೀಡಿಯೋ ಕ್ಲಿಪಿಂಗ್ಗಳನ್ನು ಬಿಡಲಾಗಿದೆ ಎನ್ನಲಾಗಿತ್ತು. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದ ರಾಧಿಕಾ, ‘ಪ್ರಚಾರಕ್ಕಾಗಿ ಗಿಮಿಕ್ ಮಾಡುವ ಅಗತ್ಯ ನಮಗಿಲ್ಲ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಲ್ಲದ ವದಂತಿಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲಎಂದಿದ್ದರು.

Leave a Reply

comments

Related Articles

error: