ಮೈಸೂರು

ತ್ವರಿತವಾಗಿ ಹೆಚ್ಚುವರಿ ಆಧಾರ್ ಕೇಂದ್ರವನ್ನು ತೆರೆಯುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಡಿ.18:- ತಿ.ನರಸೀಪುರ ಪಟ್ಟಣದಲ್ಲಿ ತ್ವರಿತವಾಗಿ ಹೆಚ್ಚುವರಿ ಆಧಾರ್ ಕೇಂದ್ರವನ್ನು ತೆರೆಯುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಿನ್ನೆ ತಿ.ನರಸೀಪುರ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದ  ಪ್ರತಿಭಟನಾಕಾರರು  ಹೆಚ್ಚುವರಿ ಕೇಂದ್ರ ತೆರೆಯುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ದಿನೇ ದಿನೇ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚುತಿದ್ದು, ತಾಲೂಕು ಕೇಂದ್ರದಲ್ಲಿ ಒಂದು ಕೇಂದ್ರ ಮಾತ್ರ ತೆರೆಯಲಾಗಿದೆ.  ಇದು ಇಲ್ಲಿನ ಜನ ಸಂಖ್ಯೆಗೆ ಸಾಲುತ್ತಿಲ್ಲ. ನಿತ್ಯ ನೂರಾರು ಜನ ಸಾಲಿನಲ್ಲಿ ನಿಲ್ಲುತ್ತಿದ್ದು  ದಿನಕ್ಕೆ 10ರಿಂದ 15 ಜನಕ್ಕೆ ಮಾತ್ರ ಕಾರ್ಡ್ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಜನರಿಗೆ ಹೆಚ್ಚಾಗಿ ಇದರಿಂದ ತೊಂದರೆಯಾಗುತ್ತಿದೆ. ಈ ಕೂಡಲೇ ಜಿಲ್ಲಾ ಹಾಗೂ ತಾಲೂಕು ಆಡಳಿತ ವತಿಯಿಂದ ಹೆಚ್ಚುವರಿ ಕೇಂದ್ರವನ್ನು ತೆರೆಯಬೇಕು ಎಂದು ಅಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಆಲಗೂಡು ಚಂದ್ರಶೇಖರ್ ಮಾತನಾಡಿ, ಮುಖಂಡ ಸೋಸಲೆ ರಾಜಶೇಖರಮೂರ್ತಿ , ದಸಂಸ ತಾಲೂಕು ಅಧ್ಯಕ್ಷ ಆರ್.ರಾಜು, ಜಿಲ್ಲಾ ಉಪಧ್ಯಕ್ಷ ಮರಿಸ್ವಾಮಿ, ಜಿಲ್ಲಾ ಸಮಿತಿ ಸದಸ್ಯ ಮನೋಜ್, ಮುಖಂಡರಾದ ಆರೀಫ್, ಸುನಂದ, ಗಗನ, ಮಹದೇವಮ್ಮ, ರಂಗರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: